:: NEWS DESK :: ವೇಷ ಇದರ ಉಲೇಖ ನಮಗೆ ಪುರಾಣದಿಂದ ಹಿಡಿದು ಇಂದಿನವರೆಗೂ ಚಾಲನೆಯಲ್ಲಿ ಹಾಗೂ ನಮ್ಮ. ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಿದ ಬಹಳ ಅರ್ಥವಿರುವ ಶಬ್ದ. ಇದು ದೇವರಿಂದ ಹಿಡಿದು ರಾಜರವರೆಗೂ ರಾಜನಿಂದ ನಮ್ಮ ಪ್ರಜಾಪ್ರಭುತ್ವದ ನಾಯಕರವರೆಗೆ ಪ್ರಜಾಪ್ರಭುತ್ವದ ನಾಯಕರಿಂದ ಹಿಡಿದು ಇಂದಿನ ಶ್ರೀ ಸಾಮಾನ್ಯನವರೆಗೂ ವೇಷ ಬದಲಾವಣೆ ನಾವು ಕಾಣಬಹುದು. ವೇಷ ಬದಲಾವಣೆ ದೇವರು ಲೋಕ ಕಲ್ಯಾಣಕಾಗಿ ರಾಕ್ಷಸರು ದೇವ ಲೋಕ ನಾಶಕ್ಕಾಗಿ ವೇಷ ಬದಲಾವಣೆ ಮಾಡುತಿದ್ದರು. ಅದರ ಬಗ್ಗೆ ವಿವರಣೆ ಅವಶ್ಯಕತೆ ಇಲ್ಲ. ಅದನ್ನು ನಾವು ಪುರಾಣ ಕಥೆಯಲ್ಲಿ ಓದಿರುತ್ತೇವೆ. ರಾಮಾಯಣ ಮತ್ತು ಮಹಾಭಾರತದಲ್ಲೂ ಇದರ ಉಲೇಖವಿದೆ. ಪುನಃ ಅದನ್ನು ಬರೆದು ನಿಮ್ಮ ಸಮಯದ ವ್ಯಯ ಮಾಡುವುದು ಬೇಡ. ಅದೇ ರೀತಿಯಲ್ಲಿ ರಾಜರ ಆಡಳಿತದಿಂದ ಹಿಡಿದು ಪ್ರಜಾಪ್ರಭುತ್ವ ಆಡಳಿತದವರೆಗೂ ವೇಷ ಬದಲಾವಣೆ ನಾವು ಕಾಣಬಹುದು. ಪತ್ತೆದಾರಿಕೆ ಗೂಢಚಾರ ಕಳ್ಳತನಕ್ಕೆ ಅಪಹರಣ ಹೀಗೆ ಹತ್ತು ಹಲವು ವಿಧಗಳ ರೂಪದಲ್ಲಿ ನಾಗರೀಕತೆ ಮತ್ತು ಆಧುನಿಕ ಜೀವನದಲ್ಲಿ ವೇಷ ಬದಲಾವಣೆ ಮನುಷ್ಯನ ಬದುಕಿನ ಭಾಗವಾಗಿ ಮನುಷ್ಯ ಹೊಟ್ಟೆ ಹೊರೆಯಲು ವೇಷ ಬದಲಾವಣೆ ಮೂಲಕ ಅನೇಕ ಮಾರ್ಗವನ್ನು ಕಂಡುಕೊಂಡನು. ಮೊದಲು ನಾಟಕಗಳ ಹಾಗೂ ಯಕ್ಷಗಾನಗಳಲ್ಲಿ ವಿವಿಧ ವೇಷಗಳನ್ನು ಧರಿಸುವ ಮೂಲಕ ಅಂದರೆ ಒಂದು ಕಥೆಯಲ್ಲಿ ಬರುವ ಪಾತ್ರಗಳನ್ನು ತಾನೇ ಅಭಿನಯದ ಮೂಲಕ ಆ ಪಾತ್ರಗಳಿಗೆ ಜೀವ ತುಂಬುವ ಮೂಲಕ ಸಮಾಜದಲ್ಲಿ ಹೊಸ ಅವಿಸ್ಕಾರಕ್ಕೆ ನಾಂದಿ ಹಾಡಿದ ನಾಟಕಗಳು ಮುಂದೆ ಚಲನಚಿತ್ರಗಳಾಗಿ ಸಮಾಜದಲ್ಲಿ ಮನೋರಂಜನೆ ನೀಡುವ ಒಂದು ಸಾಧನವಾದರೆ ಇನೊಂದೆಡೆ ಸಾವಿರಾರು ಕೋಟಿಗಟ್ಟಲೆ ಬಂಡವಾಳ ಹೂಡುವ ಕ್ಷೇತ್ರವಾಯಿತು. ಸಿನಿಮಾ ಹೀರೋಗಳು ಜನ ಸಾಮಾನ್ಯರ ಆರಾಧ್ಯ ದೇವರಾದರು. ಅದು ದಕ್ಷಿಣ ಭಾರತದಲ್ಲಿ ತೆಲುಗಿನ ಎನ್.ಟಿ. ರಾಮ್ ರಾವ್ ಕನ್ನಡದ ಡಾಕ್ಟರ್ ರಾಜ್ಕುಮಾರ್ ಹಾಕಿದ ಪೌರಾಣಿಕ ಪಾತ್ರಗಳು ಮೂಲ ಪಾತ್ರದ ನಿಜ ರೂಪವನ್ನು ಮೀರಿಸುವಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೇ ರೀತಿ ನಾಟಕ, ರಂಗಭೂಮಿ ಯಕ್ಷಗಾನದಲ್ಲಿ ಅಂದಿನ ಕಾಲದಲ್ಲಿ ಅನೇಕರು ಪಾತ್ರಗಳಿಗೆ ಅಭಿನಯದ ಮೂಲಕ ಜೀವ ತುಂಬಿ ಅದರಲ್ಲಿ ಲೀನರಾಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದು ಇತಿಹಾಸ ಸೇರಿದ್ದರು. ಅವರ ನೆನಪು ಇತಿಹಾಸದ ಪುಟಗಳಲ್ಲಿ ಇನ್ನು ಉಳಿಸಿ ಹೋಗಿದ್ದಾರೆ. ಅಂದು ವೇಷ ಬದಲಾವಣೆ ಕಲೆ ರೂಪ ಜನರು ಅದನ್ನು ನೋಡುತಿದ್ದರು ಹೊರತು ಮಾರುಕಟ್ಟೆಯಲ್ಲಿ ಅದನ್ನು ಬಿಕರಿ ಇಟ್ಟಿರಲಿಲ್ಲ. ಕಲೆಗಾರ ತಮ್ಮ ಸ್ವಾಭಿಮಾನವನ್ನು ಬಿಟ್ಟು ನಟಿಸುತ್ತಿರಲಿಲ್ಲ. ಬರುವ ಅಲ್ಪ ಪ್ರಮಾಣದಲ್ಲಿ ಸಿಗುತ್ತಿದ್ದ ಗೌರವ ಧನ ಹಾಗೂ ಹಿಂದೆಲ್ಲ ನಾಟಕ ತಂಡ, ಯಕ್ಷಗಾನ ತಂಡಗಳು ಊರಿಂದ ಊರಿಗೆ. ತೆರಳಿ ಪ್ರದರ್ಶನ ನೀಡುತಿದ್ದವು. ಜಾತ್ರೆ ಊರ ಹಬ್ಬಗಳು ಕೆಲವು ಸಾರಿ ವಿಶೇಷ ಸಂದರ್ಭದಲ್ಲಿ ಪ್ರದರ್ಶನ ನೀಡುವ ಮೂಲಕ ಹಾಗೂ ವರ್ಷಕೊಮ್ಮೆ ಕೆಲವು ನಿರ್ದಿಷ್ಟ ಊರುಗಳಲ್ಲಿ ಪ್ರತಿ ವರ್ಷ ಪ್ರದರ್ಶನ ನೀಡಿ ಅದರಿಂದ ಬದುಕು ಕಂಡುಕೊಳ್ಳುತಿದ್ದರು. ತಂತ್ರಜ್ಞಾನ ಅಭಿವೃದ್ಧಿ ಆದಂತೆ ಮುಂದೆ ರಂಗಮಂದಿರ ನಿರ್ಮಾಣವಾದವು. ಆದರೆ ಚಲನಚಿತ್ರ ಬೆಳೆದಂತೆ ಇವುಗಳೆಲ್ಲವು ಇತಿಹಾಸ ಸೇರಿ ಹೋದವು. ಇನೊಂದು ರೀತಿಯ ವೇಷ ಬದಲಿಸಿಕೊಂಡು ತಮ್ಮ ಕಲೆ ಯನ್ನು ಪ್ರದರ್ಶನ ಮಾಡುತಿದ್ದ ಇನೊಂದು ವರ್ಗ ಕೂಡ ನಾವು ಸಮಾಜದಲ್ಲಿ ನಮಗೆ ಸಮಾಜದಲ್ಲಿ ನಮಗೆ ಕಂಡು ಬರುತಿದ್ದದು. ಹುಲಿ ವೇಷದಾರಿಗಳು ಸಾಧಾರಣವಾಗಿ ಇವರುಗಳು ದಸರಾ ಹಬ್ಬದ ಸಮಯದಲ್ಲಿ ಹುಲಿಯ ಬಣ್ಣವನ್ನು ಮೈಗೆ ಬಳಿದುಕೊಂಡು ಬೀದಿಗಳಲ್ಲಿ ಕುಣಿಯುತ್ತಾ ಜನರಿಗೆ ಮನೋರಂಜನೆ ಒಟ್ಟಿಗೆ ತಮ್ಮ ಕಲೆಯ ಪ್ರದರ್ಶನ ಒಟ್ಟಿಗೆ ತಮ್ಮ ಜೀವನವನ್ನು ಕಂಡು ಕೊಂಡಿದ್ದರು. ಅದೇ ರೀತಿಯಲ್ಲಿ ಗಾಂಧಿ, ಕರಡಿ, ಗೊಂಬೆಗಳ ಹೀಗೆ ಹಲವು ವೇಷದಾರಿಗಳನ್ನು ನಾವು ಕಾಣಬಹುದಿತ್ತು. ಇನ್ನು ಅನೇಕ ಕಡೆ ಊರ ಹಬ್ಬದಲ್ಲಿ ಹರಕೆ ತೀರಿಸಲು ವೇಷ ಹಾಕಿ ಹರಿಕೆ ತೀರಿಸುವ ಪದ್ಧತಿ ಇದೆ. ಯಾವುದು ಭಕ್ತಿ ಭಾವನೆಯಿಂದ ನಡೆಯಬೇಕಿತ್ತು. ಅದು ಬಿಟ್ಟು ಕಂಡ ಕಂಡಲ್ಲಿ ದೇವರ ಪ್ರತಿ ರೂಪವನ್ನು ಬಿಂಬಿಸುವ ರೀತಿ ಒಳ್ಳೆದಲ್ಲ. ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು, ಹಿಂದೆ ಯಕ್ಷಗಾನ, ನಾಟಕಗಳಲ್ಲಿ ಚಲನಚಿತ್ರಗಳಲ್ಲಿ ಪಾತ್ರಗಳನ್ನು ಹಾಕುತಿರಲಿಲ್ಲವೇ ಎಂದು. ಹಿಂದೆ ಅವರು ಹಾಗೆ ಹಾಕುತಿರಲಿಲ್ಲ. ಅಂಥ ವಸ್ತ್ರಗಳಿಗೆ ಪೂಜೆ ಸಲ್ಲಿಸಿ ವೇದಿಕೆ ಪ್ರವೇಶ ಮಾಡುವ ಮೊದಲು ನಂತರ ಹಲವು ಶಿಷ್ಟಚಾರ ಪಾಲಿಸಿ ಮತ್ತೆ ರಂಗ ಪ್ರವೇಶ ಮಾಡುತಿದ್ದರು. ಚಲನಚಿತ್ರ ನಟರು ದೇವರ ಪಾತ್ರ ನಟಿಸುವಷ್ಟು ದಿನ ತಾವು ಹಲವು ಕಟ್ಟುಪಾಡು ವಿಧಿಸಿಕೊಂಡು ನಟಿಸುತಿದ್ದರು. ಆದರೆ ಇಂದು ಅದು ಆಟಿಕೆ ವಸ್ತುವಾದವು. ಇದಿಷ್ಟು ಮಾನವ ಪುರಾಣದಿಂದ ಹಿಡಿದು ಇಂದಿನವರೆಗೂ ಇರುವ ವೇಷ ಬದಲಾವಣೆಯ ನೋಟವಾದರೇ ಈಗ ಹೇಳಲು ಹೊರಟಿರುವುದು ಆಧುನಿಕ ಯುಗದಲ್ಲಿ ಮನುಷ್ಯ ತನ್ನ ವೇಷಧಾರಣೆ ತನ್ನ ಬದುಕಿನ ಹೋರಾಟಕ್ಕಾಗಿ ಹಗಲು ವೇಷ ಧರಿಸಿ ಬದುಕುವುದು ಅನಿವಾರ್ಯವೆನಿಸಿದೇ ಇಷ್ಟು ಹೊತ್ತು ದೇಹ ಮತ್ತು ಮನಸಿನ ಎರಡರ ವೇಷ ಬದಲಾವಣೆ ಬಗ್ಗೆ ಬರಿದ್ದೆ ಅಲ್ಲಿ ಪಾತ್ರಕ್ಕೆ ಸರಿಯಾಗಿ ಉಡುಪು ಧರಿಸಿ ಆ ಪಾತ್ರಕ್ಕೆ ಸರಿಯಾಗಿ ಅಭಿನಯಿಸಿದರೆ ನಿಜ ಜೀವನದಲ್ಲಿ ವೇಷ ಧರಿಸದೇ ಪಾತ್ರದಾರಿಯಾಗುವುದು. ಬದುಕಿನ ಜಟಕಾ ಬಂಡಿ ಸಾಗಿಸಲು ಇದರಲ್ಲಿ ಕೆಲವು ರಾಜಕಾರಣಿಗಳದ್ದು ಎತ್ತಿದ ಕೈ. ಸಂದರ್ಭಕ್ಕೆ ತಕ್ಕಂತೆ ವೇಷ ಬದಲಾಯಿಸಿ ಕೊಳ್ಳುವ ಇವರು ಚುನಾವಣೆಗೊಂದು ಪಕ್ಷ ಬದಲಾವಣೆಗೊಂಡರೆ ಅಧಿಕಾರಕ್ಕಾಗಿ ಪಕ್ಷ ಬದಲಾಯಿಸುವ ಇವರ. ನಟನೆ ಯಾವ ನಟನ ನಟನೆಗೂ ಕಡಿಮೆ ಇರುವುದು ಇಲ್ಲ. ಇನ್ನು ನಾವೆಲ್ಲರೂ ಇಂದಿನ ಆಧುನಿಕ ಬದುಕಿನ ಹೋರಾಟದಲ್ಲಿ ಒಂದಲ್ಲ ಒಂದು ರೀತಿಯ ವೇಷದಾರಿಗಳೇ. ವೈದ್ಯರು ರೋಗಿಗಳ ಎದುರಿಗೆ, ವ್ಯಾಪಾರಿಗಳು ಗ್ರಾಹಕರ ಎದುರು, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾ ಸಂಸ್ಥೆಯ ಎದುರು ಪೋಷಕರು ಬಡವರು ಶ್ರೀಮಂತನ ಎದುರು ಅಧಿಕಾರದ ಎದುರು ಅಧಿಕಾರ ಹೀನ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಹಗಲು ವೇಷ ಧರಿಸಿ ಬದುಕಾಗಬೇಕಾದ ಅನಿವಾರ್ಯತೆ ನಮ್ಮ ಬದುಕಿನದು. ಏಕೆಂದರೆ ನಾವು ಇಂದು ಆಧುನಿಕ ಜೀವನದಲ್ಲಿ ನಾವು ಇನೊಬ್ಬರ ಬದುಕಿಗೇ ಹೋಲಿಸಿಕೊಂಡು ನಾವು ಅವರೊಡನೆ ಸ್ವರ್ಧೆ ಇಳಿದದ್ದು ನಮ್ಮ ಜೀವನ ಹೈರಾಣ ಆಗಲು ಕಾರಣ.
ಕೊನೆ ಮಾತು : : ಹಿಂದೆ ಉದಾರ ನಿಮಿತ್ತಂ ಬಹುಕೃತ ವೇಷಃ ಎಂಬುದು ಈಗ ಜೀವನ ನಿಮಿತ್ತಂ ಬಹುಕೃತ ವೇಷ ಎಂದು ಬದಲಾವಣೆಯಾಗಿದೆ.
ಲೇಖನ : ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ಲೇಖಕರು
ಮಡಿಕೇರಿ
ಫೋನ್ : 94488 99554