ಮಡಿಕೇರಿ ಡಿ.9 NEWS DESK : 2024ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಉದ್ಯಾನವನ ಬೆಂಗಳೂರು ಇಲ್ಲಿ ಪುಸ್ತಕಗಳ ನೋಂದಣಿ ಅದಿನಿಯಮದಡಿ ಸಲ್ಲಿಸಲಾಗುವ ಪ್ರತಿ ಗ್ರಂಥದ ಮೂರು ಪ್ರತಿಗಳಲ್ಲಿ ಒಂದು ಪ್ರತಿಯನ್ನು ನಿಯಮಾನುಸಾರ ಆಯುಕ್ತರ ಕಚೇರಿಗೆ ಪಡೆದು ಈ ಪುಸ್ತಕವನ್ನು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು.
ಪ್ರಥಮ ಮುದ್ರಣಗೊಂಡ ವರ್ಷದಿಂದ ಕನಿಷ್ಠ 10 ವರ್ಷಗಳ ಅವಧಿಯ ನಂತರ ಮರು ಮುದ್ರಣಗೊಳ್ಳುವ/ ಪರಿಷ್ಕೃತ ಮುದ್ರಣಗೊಳ್ಳುವ ಉತ್ತಮ ಪುಸ್ತಕಗಳನ್ನು ಓದುಗರ ಬೇಡಿಕೆಗೆ ಅನುಗುಣವಾಗಿ ಆಯಾ ಪ್ರಾಧಿಕಾರಗಳ ಅಧಿಕಾರಿಗಳ/ ಪ್ರಾಧಿಕಾರದ ವಿವೇಚನಾ ಕೋಟಾದಡಿ ಸರ್ಕಾರವು ನಿಗದಿಪಡಿಸಿದ ಅಳತೆಗಳಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಿಕೊಂಡು ನೇರವಾಗಿ ಖರೀದಿಸಲು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯಿಸಿರುತ್ತಾರೆ. 2024ರಲ್ಲಿ ಕರ್ನಾಟಕದಲ್ಲಿ ಪ್ರಥಮ ಮುದ್ರಣಗೊಂಡು ಪ್ರಕಟಗೊಳ್ಳುವ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ದಿನಾಂಕ 01-01-2025 ರ ಸಂಜೆ 5.30ರ ಒಳಗಾಗಿ ನೋಂದಣಿ ಮಾಡಿಸತಕ್ಕದ್ದು, ಈ ಪುಸ್ತಕಗಳನ್ನು ಮಾತ್ರ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಪರಿಗಣಿಸಲಾಗುವುದು. ಅಂತಿಮ ದಿನಾಂಕದ ನಂತರ ನೋಂದಣಿಯಾಗುವ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೊರ ರಾಜ್ಯಗಳಲ್ಲಿ 2024ರಲ್ಲಿ ಮುದ್ರಣಗೊಂಡು ಪ್ರಕಟವಾಗುವ ಆಂಗ್ಲ, ಹಿಂದಿ ಅಥಾವ ಯಾವುದೇ ಭಾಷೆಯ ಪುಸ್ತಕಗಳನ್ನು ಆಯಾಯ ರಾಜ್ಯ ಕೇಂದ್ರ ಗ್ರಂಥಾಲಯಗಳಲ್ಲಿ ಅಥವ ಕೇಂದ್ರ/ಆಯಾಯ ರಾಜ್ಯ ಸರ್ಕಾರಗಳಿಂದ ಅಧಿಸೂಚಿಸಲ್ಪಟ್ಟ ಅದಿಕೃತ ಪುಸ್ತಕ ನೋಂದಣಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ, ನೋಂದಣಿ ಪ್ತಮಾಣಪತ್ರದ ನಕಲು ಪತ್ರದ ಪ್ರತಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು 2025 ರ ಜನವರಿ, 02 ರ ಸಂಜೆ 5.30ರ ಒಳಗೆ ಆಯ್ಕೆಗಾಗಿ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಸಲ್ಲಿಸತಕ್ಕದ್ದು. ತಡವಾಗಿ ಸಲ್ಲಿಸುವ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾಹಿತ್ಯ, ಮಕ್ಕಳ ಸಾಹಿತ್ಯ, ಕಲೆ ಮತ್ತು ವಿಜ್ನಾನ ಪ್ರಕಾರಗಳ ಯಾವುದೇ ಭಾಷೆಯ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಸಲ್ಲಿಸಬಹುದು. ಸ್ಪರ್ಧಾತ್ಮಕ, ಪಠ್ಯ, ಪರಾಮರ್ಶೆ, ಸಾಂದರ್ಭಿಕ ಮತ್ತು ಅಭಿನಂದನ ಗ್ರಂಥಗಳನ್ನು ಸ್ಥಳೀಯ ಓದುಗರ ಬೇಡಿಕೆಗೆ ಅನುಗುಣವಾಗಿ ಆಯಾಯ ಪ್ರಾಧಿಕಾರಗಳ ಅಧಿಕಾರಿಗಳ/ಪ್ರಾಧಿಕಾರಗಳ ವಿವೇಚನಾ ಕೋಟಾದಡಿ ನಿಯಮಾನುಸಾರ ಬೆಲೆ ನಿಗದಿಪಡಿಸಿಕೊಂಡು ನೇರವಾಗಿ ಖರೀದಿಸಲು ಆಯ್ಕೆ ಸಮಿತಿ ಸಭೆಯಲ್ಲಿ ನಿರ್ಣಯಿಸಿರುತ್ತಾರೆ. 2024ನೇ ವರ್ಷದಲ್ಲಿ ಪ್ರಕಟಗೊಂಡ ಪುಸ್ತಕಗಳ ಆಯ್ಕೆಗೆ ಪ್ರತ್ಯೇಕವಾಗಿ ಆಯುಕ್ತರ ಕಚೇರಿಯಲ್ಲಿ ಯಾವುದೇ ಪುಸ್ತಕಗಳನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಪುಸ್ತಕಗಳನ್ನು ಸಲ್ಲಿಸಲು ಇಚ್ಚಿಸುವ ಕುರಿತು ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ನಿಗದಿತ ಅವಧಿಯೊಳಗೆ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ನೋಂದಣಿ ಅಧಿನಿಯಮದಡಿ ನಿಯಮಾನುಸಾರ ಪುಸ್ತಕಗಳನ್ನು ಸಲ್ಲಿಸತಕ್ಕದ್ದು. ನೋಂದಣಿಗಾಗಿ ನಿಗದಿತ ಆರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಇಲಾಖಾ ಆಂತರ್ಜಾಲ www.dpl.karnataka.gov.in ಮತ್ತು ಆಯುಕ್ತರ ಕಚೇರಿಯ ದೂರವಾಣಿ ಸಂಖ್ಯೆ: 080-22864990/ 22867358 ಅಥವಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯ ಮಡಿಕೇರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ತಿಳಿಸಿದ್ದಾರೆ.