ಸುಂಟಿಕೊಪ್ಪ ಡಿ.9 NEWS DESK : ಸಂತ ಅಂತೋಣಿ ದೇವಾಲಯದಲ್ಲಿ ಅಮಲೋದ್ಭವ ಮಾತೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಂತೋಣಿ ದೇವಾಲಯದ ಧರ್ಮ ಗುರುಗಳಾದ ವಂ. ಫಾಧರ್ ವಿಜಯಕಮಾರ್ ಮಂಜಿಕೆರೆಯ ಗದ್ದೆಯಲ್ಲಿ ವಿಶೇಷ ಪ್ರಾರ್ಥನೆ, ಭತ್ತದ ಫೈರನ್ನು ಕೊಯ್ದು ಮೆರವಣಿಗೆಯ ಮೂಲಕ ತರಲಾಯಿತು. ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರಿ ಮಠದ ಕನ್ಯಾಸ್ತ್ರಿಯರು ಹಾಗೂ ಕ್ರೈಸ್ತ ಬಾಂಧವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ನಂತರ ಧರ್ಮಗರುಗಳು ವಿಜಯಕುಮಾರ್ ಹಾಗೂ ಮಡಿಕೇರಿ ವಲಯ ಶ್ರೇಷ್ಠ ಗುರು ಹಾಗೂ ಮಡಿಕೇರಿ ಸಂತ ಮೈಕಲರ ದೇವಾಲಯದ ಧರ್ಮಗುರುಗಳಾದ ದೀಪಕ್ ಅಡಂಬರ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ನೆರದಿದ್ದ ಕ್ರೈಸ್ತ ಬಾಂಧವರಿಗೆ ಭತ್ತದ ತೆನೆಗಳನ್ನು ವಿತರಿಸಿದರು.