ವಿರಾಜಪೇಟೆ ಡಿ.12 NEWS DESK : ಮೈಸೂರು ಮಹಾರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 3ನೇ ವಿ.ಎಸ್.ಕೆ. ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಗೋಜೂ ರಿಯೊ ಕರಾಟೆ ತರಬೇತಿ ಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ಶಾಲೆಯ ಬಾಲಕ ಬಾಲಕಿಯರು ಸೇರಿದಂತೆ ಒಟ್ಟು 51 ಮಂದಿ ವಿದ್ಯಾರ್ಥಿಗಳು ಕತ ಮತ್ತು ಕುಮಿತೆ ವಿಭಾಗದಲ್ಲಿ ಗೊಜೊ ರಿಯೊ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯಾವಳಿಯ ಸಮಗ್ರ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ವಿದ್ಯಾರ್ಥಿಗಳಿಗೆ ಸೆನ್ಸಾಯಿ ಎಂ.ಬಿ.ಚಂದ್ರನ್ ತರಬೇತಿ ನೀಡಿದ್ದಾರೆ.