ಮಡಿಕೇರಿ ಡಿ.12 NEWS DESK : ಶ್ರೀ ಹನುಮಸೇನಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಕುಶಾಲನಗರದಲ್ಲಿ ನಡೆಯುವ ಹನುಮ ಜಯಂತೋತ್ಸವದಲ್ಲಿ ಕೂಡಿಗೆ ಕೂಡುಮಂಗಳೂರು ಸಮಿತಿಯಿಂದ ನಡೆಯುವ 3ನೇ ವರ್ಷದ ಶೋಭಯಾತ್ರೆಯಲ್ಲಿ ಈ ಬಾರಿ ಅಯೋಧ್ಯೆಯ ಬಾಲ ರಾಮಮಂದಿದ ಮಾದರಿ ಶೋಭಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ. ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಅತ್ಯಾಕರ್ಷಕ ಡಿ.ಜೆ.ವಾದ್ಯವೃಂದದೊಂದಿಗೆ ಹಾಗೂ ಆಕರ್ಷಕ ವಿವಿಧ ಕಲಾ ತಂಡದ ಪ್ರದರ್ಶನಗಳೊಂದಿಗೆ ಹೊರಡುವ ಶೋಭಯಾತ್ರೆಯು ಹಾಸನ ಹೆದ್ದಾರಿಯ ಮೂಲಕ ಹೊರಟು ಕೂಡಿಗೆ- ಕೂಡುಮಂಗಳೂರು ಮತ್ತು ಕೂಡ್ಲೂರು ಮಾರ್ಗವಾಗಿ ಪ್ರಮುಖ ರಾಜ್ಯ ಹೆದ್ದಾರಿ ಬೀದಿಯ ಮೂಲಕ ಸಾಗಿ ಕುಶಾಲನಗರದಲ್ಲಿ ನಡೆಯುವ ಅದ್ದೂರಿ ಹನುಮ ಜಯಂತೋತ್ಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಶೋಭಯಾತ್ರೆಯ ಅಂಗವಾಗಿ ಸಮಿತಿಯ ನೂರಾರು ಯುವಕ ತಂಡದವರಿಂದ ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು ಗ್ರಾಮ ವರೆಗಿನ ಹೆದ್ದಾರಿಯ ಎರಡೂ ಬದಿಗಳಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್ ಗಳಿಂದ ಗ್ರಾಮವನ್ನು ಸಿಂಗಾರ ಮಾಡಲಾಗಿದೆ. ಶೋಭಯಾತ್ರೆಗೆ ಸಂಬಂಧಿಸಿದ ಬೃಹತ್ ಕಲಾಕೃತಿಯ ವಿಗ್ರಹದ ಚಲನಾ ವಲನದ ಮತ್ತು ಅದಕ್ಕೆ ಸಂಬಂಧಿಸಿದ ಭಕ್ತಿ ಗೀತೆಗಳ ಅಳವಡಿಕೆಯ ಕಾರ್ಯವು ಸಮಿತಿ ವತಿಯಿಂದ ನಡೆದಿದ್ದು, ಎಲ್ಲಾ ಪ್ರದರ್ಶನವು ಸಂಜೆ 3 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಕಾರ್ಯದರ್ಶಿ ಮಂಜುನಾಥ ಮಾಹಿತಿ ನೀಡಿದ್ದಾರೆ.