ಸುಂಟಿಕೊಪ್ಪ ಡಿ.16 NEWS DESK : ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆವರಣದಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ದುರ್ಗಾಲಕ್ಷ್ಮಿ ದೇವಿಯ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವು ಡಿ.21 ರಿಂದ 25ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ. ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರವು 1992 ಮೇ 8 ರಂದು ಸ್ಥಾಪನೆಗೊಂಡ ನಂತರದ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಕನ್ನಿಮೂಲ ಗಣಪತಿ, ಹಾಗೂ ನೈವೇದ್ಯ ಕೊಠಡಿ ಮತ್ತು ದೇವಸ್ಥಾನದ ಕಚೇರಿ ನಿರ್ಮಿಸಲಾಗಿತ್ತು. ಅದರಂತೆ ದುರ್ಗಾ ದೇವಿಯ ದೇವಸ್ಥಾನವನ್ನು ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಶ್ರೀ ದುರ್ಗಾಲಕ್ಷ್ಮಿ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಕಳೆದ 8 ತಿಂಗಳ ಹಿಂದೆ ಪುತ್ತೂರಿನ ಜಗನಿವಾಸ್ ರಾವ್ ಭೂಮಿ ಪೂಜೆ ನೇರವೇರಿಸಿದರು. ಪುತ್ತೂರಿನ ಶಿಲ್ಪಿಗಳಾದ ಕೃಷ್ಣಪ್ರಸಾದ್ ರವರು ಶಿಲ್ಪಿ ಕಾರ್ಯವನ್ನು ನಿರ್ವಹಿಸುವ ಮೂಲಕ ದೇವಸ್ಥಾನವು ಜೀರ್ಣೋದ್ಧಾರಕ್ಕೆ ಸನ್ನದ್ಧವಾಗಿದೆ. ಊರಿನ ಭಕ್ತಾಧಿಗಳು ಮತ್ತು ಸುತ್ತ ಮುತ್ತಲಿನ ದಾನಿಗಳ ಸಹಾಯದಿಂದ ಸರಿಸುಮಾರು 18 ರಿಂದ 20 ಲಕ್ಷ ವೆಚ್ಚದಲ್ಲಿ ದೇವಿಯ ಆಲಯ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ ಎಂದು ದೇವಸ್ಥಾನ ಸಮಿತಿ ಬಿ.ಎಂ.ಸುರೇಶ್ ತಿಳಿಸಿದರು. ಡಿ.21ರಿಂದ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂಧನ್ ತಂತ್ರಿ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯವು ವೈದಿಕ ಧಾರ್ಮಿಕ, ವಿಧಿ ವಿಧಾನ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಡಿ.22 ರಂದು ಬೆಳಿಗ್ಗೆ 4 ಗಂಟೆಗೆ ಗಣಪತಿ ಹೋಮ, ತಿಲಾಹೋಮ, ಸಾಯುಜ್ಯಪೂಜೆ ಸಂಜೆ 6 ಗಂಟೆಗೆ ಪ್ರಸಾದಬಿಂಬ ಪರಿಗ್ರಹ, ಜಲಾದಿವಾಸ ಪುಣ್ಯಹಃ, ಪ್ರಸಾದಶುದ್ಧಿ, ಅಸ್ತ್ರಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಲಿದೆ. ಡಿ.23 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, ತ್ರಿಕಾಲ ಪೂಜೆ ಪುಣ್ಯಹಃ, ಮಧ್ಯಾಹ್ನ ಪೂಜೆ ಮಹಾಮಂಗಳಾರತಿ, ಸಂಜೆ ಸ್ಥಳ ಶುದ್ಧಿ, ತ್ರಿಕಾಲ ಪೂಜೆ, ಅತ್ತಾಯ ಪೂಜೆ ಮಹಾ ಮಂಗಳಾರತಿ ನೆರವೇರಲಿದೆ. ಡಿ.24 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಶ್ರೀ ಅಯ್ಯಪ್ಪಸ್ವಾಮಿಗೆ ತತ್ವಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ, ಶ್ರೀ ಭಗವತಿಯ ಶಯ್ಯಾ ಪೂಜೆ, ನಿದ್ರಾ ಕಲಶ ಪೂಜೆ, ಮಧ್ಯಾಹ್ನ ಪೂಜೆ ಮಂಗಳಾರತಿ ಸಂಜೆ 6 ಗಂಟೆಗೆ ಬಿಂಬ ಶುದ್ಧಿ, ಕಲಶಪೂಜೆ, ಆದಿವಾಸ ಹೋಮ, ಮಂಡಲ ಪೂಜೆ,ಬಿಂಬ ಶುದ್ಧಿ, ಧ್ಯಾನಾಧಿವಾಸಂ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಲಿದೆ. ಡಿ.25 ರಂದು ಬೆಳಿಗ್ಗೆ ಗಣಪತಿ ಹೋಮ, ಆದಿವಾಹನ ವಿಡರ್ತಿ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿಯ ಬ್ರಹ್ಮಕಲಶ ಪೂಜೆ, ಶ್ರೀ ಭಗವತಿಯ ಬ್ರಹ್ಮಕಲಶ ಪೂಜೆ, ಶ್ರೀ ಗಣಪತಿಯ ಬ್ರಹ್ಮಕಲಶಾಭಿಷೇಕ, ಶ್ರೀ ಭಗವತಿಯ ಪ್ರಸಾದ ಪ್ರತಿಷ್ಟೆ ಸಮಯ 10 ರಿಂದ 12 ರ ಶುಭ ಮುಹೂರ್ತ ಕುಂಭ ಲಗ್ನದಲ್ಲಿ ಶ್ರೀ ದುರ್ಗ ಲಕ್ಷ್ಮಿ ದೇವಿಯ ಪ್ರತಿಷ್ಟೆ, ನಿದ್ರಾಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀ ಅಯ್ಯಪ್ಪಸ್ವಾಮಿಯ ಬ್ರಹ್ಮಕಲಶಾಭಿಷೇಕ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ. ಡಿ.26 ರಂದು ವಾರ್ಷಿಕ ಮಂಡಲಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪೂವಾಹ್ನ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, 7.10 ಗಂಟೆಗೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೆಕ, 7.30ಕ್ಕೆ ಚಂಡೆಮೇಳ, 9 ಗಂಟೆಗೆ ಶ್ರೀ ಅಯ್ಯಪ್ಪಸ್ವಾಮಿಗೆ ಪಂಚಾಮೃತಾಭಿಷೇಕ, 11.30ಕ್ಕೆ ಅಯ್ಯಪ್ಪಸ್ವಾಮಿಗೆ ಲಕ್ಷಾರ್ಚನೆ, 12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಲ್ಲಪೂಜೆ ಹಾಗೂ 1 ಗಂಟೆಗೆ ಮಹಾಪೂಜೆ ಮತ್ತು ಗಂಭೀರ ಪಟಾಕಿ ಸಿಡಿಸಲಾಗುವುದು. ವಿಶೇಷ ಪೂಜೆ ಬಿಲ್ವಪತ್ರೆ ಆರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾಚನೆ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ವಿಶೇಷವಾಗಿ ಸಂಜೆ 6.30 ಕ್ಕೆ ದೀಪಾರಾಧನೆ ಮತ್ತು ಮೆರವಣಿಗೆ 7.30 ಕ್ಕೆ ದುರ್ಗಾಪೂಜೆ ನಡೆಯಲ್ಲಿದ್ದು ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಬಿ.ಎಂ.ಸುರೇಶ್ ತಿಳಿಸಿದ್ದಾರೆ.