ಮಡಿಕೇರಿ ಡಿ.21 NEWS DESK : ಕುಂಗ್‍ಫು ಅಸೋಸಿಯೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿ ಮಕ್ಕಂದೂರು ಗ್ರಾಮದ ಎನ್.ಸಿ.ಸುದರ್ಶನ್ ಆಯ್ಕೆಯಾಗಿದ್ದಾರೆ. ಇವರನ್ನು ಅಂತರರಾಷ್ಟ್ರೀಯ ಕುಂಗ್‍ಫು ಕೌನ್ಸಿಲ್‍ನ ಸ್ಥಾಪಕಾಧ್ಯಕ್ಷ ಪಾಪುನ್ ಪೌಲ್ ಆಯ್ಕೆ ಮಾಡಿದ್ದಾರೆ. ಎನ್.ಸಿ.ಸುದರ್ಶನ್ ಅವರ ಬಳಿ ಕೊಡಗಿನ ಅನೇಕ ವಿದ್ಯಾರ್ಥಿಗಳು ಕುಂಗ್‍ಫು ತರಬೇತಿ ಪಡೆಯುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ.