ನಾಪೋಕ್ಲು ಜ.23 NEWS DESK : ಜಾರ್ಕಂಡ್ ನಲ್ಲಿ ನಡೆಯಲಿರುವ 19 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಹಾಕಿ ತಂಡಕ್ಕೆ ಕುಶಾಲನಗರದ ಅನುಗ್ರಹ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಿ.ಯು.ತನುಷ್ ಆಯ್ಕೆಯಾಗಿದ್ದಾರೆ. ತನುಷ್ ಕಕ್ಕಬ್ಬೆ ಕುಂಜಿಲ ಗ್ರಾಮದ ಪೊಂಗೇರ ಉಲ್ಲಾಸ ಮತ್ತು ಹೇಮಾ ದಂಪತಿಗಳ ಪುತ್ರ.ಕೂಡಿಗೆಯ ಹಾಕಿ ತರಬೇತಿದಾರರಾಗಿರುವ ಬಿ.ಎಸ್.ವೆಂಕಟೇಶ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಪಂದ್ಯಾವಳಿಯು ಜ.29ರಿಂದ ಫೆ.2 ರ ವರೆಗೆ ನಡೆಯಲಿದೆ.
ವರದಿ : ದುಗ್ಗಳ ಸದಾನಂದ.