ಮಡಿಕೇರಿ NEWS DESK ಡಿ.29 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಸಋಷಿ, ರಾಷ್ಟçಕವಿ ಕುವೆಂಪು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ನಗರದಲ್ಲಿ ಕುವೆಂಪು ಪುತ್ಥಳಿಗೆ ಗೌರವ ಅರ್ಪಿಸಿತು.
ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಮೋಹನ್ ವಿ.ಜಿ ಅವರ ನೇತೃತ್ವದಲ್ಲಿ ಸಂಘದ ಪ್ರಮುಖರು ನಗರದ ರಾಜಾಸೀಟು ರಸ್ತೆಯಲ್ಲಿರುವ ವಿಶ್ವ ಮಾನವ ಕುವೆಂಪು ಉದ್ಯಾನವನದಲ್ಲಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಮೋಹನ್ ವಿ.ಜಿ ರಾಷ್ಟ್ರದ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರು ನೀಡಿದ ಕೊಡುಗೆಯನ್ನು ಬಣ್ಣಿಸಿದರು. ನಿರ್ದೇಶಕ ಹಾಗೂ ವಕೀಲ ಎಂ.ಎ.ನಿರಂಜನ್ ಅವರು ಮಾತನಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಗಳಿಸಿದ ಅಗ್ರಗಣ್ಯ ಕುವೆಂಪು ಅವರ ಕೃತಿಗಳನ್ನು ಪ್ರತಿಯೊಬ್ಬರು ಓದಿ ಮನನ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆ ಕುವೆಂಪು ಅವರ ಆದರ್ಶಗಳನ್ನು ಮತ್ತು ಕವಿ ಮನಸ್ಸನ್ನು ನಿತ್ಯ ಸ್ಮರಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ರಾಷ್ಟ್ರಕವಿಯ ಬದುಕಿನ ಕುರಿತು ವಿವರಿಸಿದರು. ಸಂಘದ ಪದಾಧಿಕಾರಿಗಳಾದ ರಮೇಶ್ ಕೆ., ಮಂಜುನಾಥ ವಿ.ಎ, ಶಿವಕುಮಾರ್ ಜಿ.ಎಂ, ರಾಜೇಶ್ ವಿ.ಸಿ, ವಿನಾಯಕ ಕೆರೆಮನೆ, ಬೆಳ್ಳಿಯಪ್ಪ ಹಾಗೂ ಧನಂಜಯ ಎಂ. ಹಾಜರಿದ್ದು ಗೌರವ ಅರ್ಪಿಸಿದರು.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*