ಸುಂಟಿಕೊಪ್ಪ ಡಿ.30 NEWS DESK : ಕಾವೇರಿ ನದಿಯ ಒಡಲಿಗೆ ಕಲುಷಿತ ನೀರನ್ನು ಬಿಡುವುದನ್ನು ತಡೆಗಟ್ಟಬೇಕೆಂದು ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ವಿದ್ಯಾರ್ಥಿನಿ ಬಾಲ ವಿಜ್ಞಾನಿ ವಿದ್ಯಾರ್ಥಿನಿ ಎ.ಎಸ್.ಶ್ರೀಶಾ ಮನವಿ ಮಾಡಿದರು. ಕೊಡಗು ಮೈಸೂರು ಲೋಕಸಭಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿನಿ ಕಾವೇರಿ ನದಿಯು ಇತ್ತೀಚಿನ ಮಾಲಿನತೆಯಿಂದ ಕಲುಷಿತಗೊಳಿಸುತ್ತಿದ್ದು, ನದಿಯ ಶುದ್ಧತೆಯನ್ನು ಕಾಯುವ ದಿಸೆಯಲ್ಲಿ ನದಿಗೆ ಕಲುಷಿತ ನೀರು ಬಿಡುವುದನ್ನು ತಡೆಗಟ್ಟುವಂತೆ ಪತ್ರದ ಮೂಲಕ ಮನವಿ ಮಾಡಿಕೊಂಡರು.