ಮಡಿಕೇರಿ ಜ.3 NEWS DESK : ಹಿರಿಯ ನಾಗರಿಕರ ವೇದಿಕೆ ಹಾಗೂ ಮಡಿಕೇರಿ ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಜ.10 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರ ತನಕ ಮಡಿಕೇರಿಯ ಲಯನ್ಸ ಕ್ಲಬ್ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ‘ಕಿವಿ ತಪಾಸಣಾ ಶಿಬಿರ’ ನಡೆಯಲಿದೆ ಎಂದು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರು ತಿಳಿಸಿದ್ದಾರೆ.












