ಮಡಿಕೇರಿ NEWS DESK ಜ.4 : ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಕೊಡಗಿನ ಮನ್ನೆರ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ಮನ್ನೆರ ಪ್ರಶಸ್ತಿ ಅವರು ಕರ್ನಾಟಕ ಮತ್ತು ಗೋವಾ ಬೆಟಾಲಿಯನ್ ಏರ್ ವಿಂಗ್‌ನಿಂದ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಪೊನ್ನಂಪೇಟೆ ತಾಲ್ಲೂಕು ಹರಿಹರ ಗ್ರಾಮದ ನಿವಾಸಿ ಮನ್ನೆರ ಮನು ಹಾಗೂ ಸೌಮ್ಯ ದಂಪತಿ ಪುತ್ರಿಯಾಗಿದ್ದು, ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.