ಗೋಣಿಕೊಪ್ಪ ಜ.6 NEWS DESK : ಸರ್ವದೈವತ ವಿದ್ಯಾ ಸಂಸ್ಥೆಯ ವತಿಯಿಂದ ಜ.16ರಂದು ಅರುವತ್ತೊಕ್ಲು ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲಾಮಟ್ಟದ ಅಂತರ ಶಾಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ತಿಳಿಸಿದ್ದಾರೆ. ಶಾಲೆಯಲ್ಲಿ ನಡೆದ ಅಂತರ್‍ಶಾಲಾ ಸ್ಪರ್ಧೆಯ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಜಾನಪದ ಸಮೂಹ ಗೀತೆ ಸ್ಪರ್ಧೆ, ಕ್ಲೇ ಮಾಡಲಿಂಗ್, ಸಿನಿಮಾ ಹಾಡಿಗೆ ನೃತ್ಯ, ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಪರಿಸರ ವ್ಯವಸ್ಥೆ, ಹವಾಮಾನ ಬದಲಾವಣೆ, ರೊಬೊಟಿಕ್ಸ್, ಸಾಮಾಜಿಕ, ಪೌರಾಣಿಕ ವಿಚಾರದ ಛದ್ಮವೇಷ, ಚೆಸ್ ಸ್ಪರ್ಧೆ, ಜಾಗತಿಕ ದುರಂತಗಳಿಗೆ ಕೈಗಾರಿಕೀಕರಣವೇ ಕಾರಣ ಹೌದು ಅಥವಾ ಇಲ್ಲ ಎಂಬ ವಿಚಾರವಾಗಿ ಚರ್ಚಾಸ್ಪರ್ಧೆ ನಡೆಯಲಿದೆ ಎಂದರು. ಆಸಕ್ತ ಶಾಲೆಯ ವಿದ್ಯಾರ್ಥಿಗಳು ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗೆ 8277021505/ 9482138848/ 9481226954 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಪ್ರಾಂಶುಪಾಲ ಪಿ.ಆರ್.ಪ್ರದೀಪ್, ಶಿಕ್ಷಕರುಗಳಾದ ಲೀನಾ ರಾಘವೇಂದ್ರ, ಮೋನಿಕಾ, ಧರಣಿ, ಕಾವೇರಮ್ಮ ಉಪಸ್ಥಿತರಿದ್ದರು.