ವಿರಾಜಪೇಟೆ ಜ.7 NEWS DESK : ವಿರಾಜಪೇಟೆಯ ಮಟನ್ ಮಾರ್ಕೆಟ್ ಬಳಿ ಇರುವ ಆಟೋ ನಿಲ್ದಾಣಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಆಟೋ ಚಾಲಕರ ಮನವಿಗೆ ಸ್ಪಂದಿಸಿದರು. ವಿರಾಜಪೇಟೆಯ ಮಟನ್ ಮಾರ್ಕೆಟ್ ಬಳಿ ಹಲವಾರು ವರ್ಷದಿಂದ ಇದ್ದ ಆಟೋ ನಿಲ್ದಾಣವನ್ನು ಬದಲಾಯಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ಆಟೋ ಚಾಲಕರು ಶಾಸಕರೊಂದಿಗೆ ತಮ್ಮ ನೋವನ್ನು ಹೇಳಿಕೊಂಡರು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಆಟೋ ಚಾಲಕರ ಅಹವಾಲುಗಳನ್ನು ಆಲಿಸಿದ ಶಾಸಕರು, ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಲ್ಲಿಯೇ ಆಟೋ ನಿಲ್ದಾಣವನ್ನು ಚಾಲಕರ ಇಚ್ಛೆಯಂತೆ ಮುಂದುವರೆಯಲು ಸೂಚನೆ ನೀಡಿದರು. ಅಲ್ಲದೇ ತಾವೇ ಸ್ವತಹ ಆಟೋವನ್ನು ಚಾಲನೆ ಮಾಡುವ ಮೂಲಕ ಆಟೋ ಚಾಲಕರೊಂದಿಗೆ ತಾನು ಸದಾ ಇದ್ದೇನೆ ಎಂದು ಸಂದೇಶ ಸಾರಿದರು. ಈ ಸಂದರ್ಭ ಆಟೋ ಚಾಲಕರು ಹಾಗೂ ಸಾರ್ವಜನಿಕರು ಶಾಸಕರಿಗೆ ಜಯ ಘೋಷ ಕೂಗಿ ಹರ್ಷ ವ್ಯಕ್ತಪಡಿಸಿದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಹಾಗೂ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹಾಗೂ ಪದಾಧಿಕಾರಿಗಳು, ಪಕ್ಷದ ಮುಖಂಡರುಗಳು, ಸಾರ್ವಜನಿಕರು ಹಾಜರಿದ್ದರು.