ನಾಪೋಕ್ಲು ಜ.7 NEWS DESK : ಎಸ್‍ಎನ್‍ಡಿಪಿ ಶಾಖೆಯ ನೂತನ ಅಧ್ಯಕ್ಷರಾಗಿ ಟಿ.ಸಿ.ಲವ ಆಯ್ಕೆಯಾಗಿದ್ದಾರೆ. ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದ್ದ ಎಸ್‍ಎನ್‍ಡಿಪಿ ಶಾಖೆಯ ಸಂಘಟನಾ ಪುನರ್ ರಚನಾ ಕಾರ್ಯಕ್ರಮದಲ್ಲಿ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪಿ.ಎನ್.ಹರಿದಾಸ್, ಎಂ.ಕೆ.ತಂಗ, ಕಾರ್ಯದರ್ಶಿಯಾಗಿ ಪಿ.ಸಿ.ಕಿಶೋರ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಎಂ.ಆರ್.ಅಜಿತ್, ಖಜಾಂಜಿಯಾಗಿ ಕೆ.ಬಿ.ಸುಧೀಶ್, ಯೂನಿಯನ್ ಪ್ರತಿನಿಧಿಯಾಗಿ ಟಿ.ಸಿ.ರಾಜೀವ್, ಸಂಘಟನಾ ಕಾರ್ಯದರ್ಶಿ ಚಿನ್ನ, ಸಂಘಟನಾ ಸಹ ಕಾರ್ಯದರ್ಶಿಯಾಗಿ ಎ.ಕೆ.ಮನೋಹರ, ನಿರ್ದೇಶಕರಾಗಿ ಟಿ.ಸಿ.ಮಣಿ, ಟಿ.ಸಿ.ಹರೀಶ್, ಪಿ.ಬಿ.ಹರೀಶ್ ಕುಮಾರ್ ನೇಮಕಗೊಂಡರು. ಸಂಘದ ಅಧ್ಯಕ್ಷ ಟಿ.ಸಿ.ರಾಜೀವ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್, ಕೊಡಗು ಜಿಲ್ಲಾ ಮಹಿಳಾ ಯೂನಿಯನ್ ಹಾಗೂ ಬ್ಯಾಂಕ್ ಅಧ್ಯಕ್ಷ ರಿಷ ಸುರೇಂದ್ರನ್, ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೇಮಾನಂದ, ನಾಪೋಕ್ಲು ವಿ ಎಸ್ ಎಸ್ ಎನ್ ನಿರ್ದೇಶಕ, ಎಸ್.ಎನ್‍ಡಿ.ಪಿ ಶಾಖೆಯ ನಿರ್ದೇಶಕ ಟಿ.ಎ.ಮಿಟ್ಟು, ನಾಪೋಕ್ಲು ಶಾಖೆಯ ಉಪಾಧ್ಯಕ್ಷ ಟಿ.ಆರ್.ಮಣಿ, ಕಬಡಕೇರಿ ನಿರ್ದೇಶಕ ವಿನಿಲ್ ಪಪ್ಪು, ಗೌರವ ಕಾರ್ಯದರ್ಶಿ ಟಿ.ಕೆ.ರಘು ಹಾಗೂ ಶಾಖೆಯ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.