ಕುಶಾಲನಗರ ಜ.8 NEWS DESK : ಮೈಸೂರಿನ ಕುವೆಂಪು ನಗರದ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ತೋಳು ಕುಸ್ತಿ ಪಂದ್ಯಾವಳಿಯಲ್ಲಿ ಸಿದ್ದಾಪುರದ ಇಕ್ರಾ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಆದಿಲ್ ಅರಫಾ ಸಾಧನೆ ತೋರಿದ್ದಾನೆ. 60 ಹಾಗೂ 65 ಕೆಜಿ ತೂಕದ ಪಂದ್ಯಾವಳಿಯಲ್ಲಿ ಮೊದಲ ಸ್ಥಾನಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಆದಿಲ್ ಅರಫಾ ಕುಶಾಲನಗರದ ಪ್ರವಾಸೋದ್ಯಮಿ ಕಿಂಗ್ಸ್ ವಿ ಡ್ರೀಮ್ ಮಾಲೀಕ ಎಂ.ಎಂ.ದಾವುದ್ ಹಾಗೂ ಎಂ.ಬಿ.ಸೌಧ ದಂಪತಿಯ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಇಕ್ರಾ ಶಾಲೆಯ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತ ಪಡಿಸಿದೆ.