ಮಡಿಕೇರಿ ಜ.11 NEWS DESK : ಬಾಲಂಬಿ ಹನುಮಾನ್ ಯುವಕ ಮಂಡಲ ರಚನೆಯಾಗಿದ್ದು, 2024-25ರ ಅವಧಿಗೆ ನೂತನ ಅಧ್ಯಕರಾಗಿ ಸತೀಶ್ ಎ.ಸಿ. ಆನ್ಯಾಳ ಆಯ್ಕೆಯಾದರು. ಆನ್ಯಾಳದ ಧ್ವಾಕ್ರ ಭವನದಲಿ ನಡೆದ ಕಾರ್ಯಕ್ರಮವನ್ನು ಅಜಿಲ ಯಾನೆ ನಲಿಕೆ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ.ಕೆ.ಬಾಲಕೃಷ್ಣ ಉದ್ಘಾಟಿಸಿದರು. ದಬ್ಬಡ್ಕ್ ಕಾಂತುಬೈಲ್ ಶ್ರೀರಾಮ ಯುವಕ ಮಂಡಲದ ಸ್ಥಾಪಕ ಬಿ.ಎಸ್. ಪ್ರಜ್ವಲ್ ಯುವಕ ಮಂಡಲದ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡಿದರು. ಅಜಿಲ ಯಾನೆ ನಲಿಕೆ ಸಮಿತಿಯ ಅಧ್ಯಕ್ಷ ಕೆ.ಕೆ.ದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಿ.ಚಂದಪ್ಪ, ಸದಸ್ಯರಾದ ಕುಮಾರ್ ಕಲ್ಲುಗುಂಡಿ, ಕೆ.ಕೆ.ಶಿವಪ್ಪ, ಬಿ.ಕೃಷ್ಣಪ್ಪ ಹಾಜರಿದ್ದರು. ಸಿ.ಅರುಣ್ ನಿರೂಪಿಸಿದರು.
ನೂತನ ಪದಾಧಿಕಾರಿಗಳು :: ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್ ಆನ್ಯಾಳ, ಕೋಶಧಿಕಾರಿಯಾಗಿ ಅಶ್ವಿನ್ ಕೊಯನಾಡು, ಹಿರಿಯ ಸಲಹೆಗರರಾಗಿ ಕೆ.ಕೆ.ದೇವಪ್ಪ ಮತ್ತು ಕೆ.ಬಿ.ಚಂದಪ್ಪ ಅವರನ್ನು ಆಯ್ಕೆ ಮಾಡಲಾಯಿತು.