ಮಡಿಕೇರಿ ಜ.14 NEWS DESK : ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಗ್ರಾಮೀಣ ಕ್ರೀಡೆಗಳಿಗೆ ಸಂಬಂಧಿಸಿದ ಇಲಾಖೆ ವತಿಯಿಂದ ಅನುದಾನ ಮತ್ತು ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು. ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆಗೋಟೆಯ ಶ್ರೀ ಬಸವೇಶ್ವರ ಯುವಕರ ಬಳಗದ ವತಿಯಿಂದ ಹಳೆಗೋಟೆ ಗ್ರಾಮದಲ್ಲಿ ನಡೆದ ಪ್ರಥಮ ವರ್ಷದ ರಾಜ್ಯ ಮಟ್ಟದ ಕರುಗಳ ಚಕ್ಕಡಿಯ ಚಕ್ರದ ಪಾಯಿಂಟ್ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತಾನಾಡಿದರು. ಕುಶಾಲನಗರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತಾನಾಡಿ, ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಹೆಬ್ಬಾಲೆ, ತೊರೆನೂರು ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಹೈನುಗಾರಿಕೆಗೆ ಒತ್ತು ನೀಡುವುದರ ಜೊತೆಯಲ್ಲಿ ಇಂತಹ ಗ್ರಾಮೀಣ ಪ್ರದೇಶದ ಪ್ರಮುಖ ಕ್ರೀಡೆಯಾದ ಗಾಡಿ ಓಟದ ಸ್ಪರ್ಧೆ ಗ್ರಾಮೀಣ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 20 ಜೊತೆಯ 2 ಹಲ್ಲಿನ ಕರುಗಳು ಮತ್ತು 4 ಹಲ್ಲಿನ ಕರುಗಳ ಜೊತೆಗಳ ತಂಡವು ಭಾಗವಹಿಸಿತು. ಶ್ರೀ ಬಸವೇಶ್ವರ ಯುವಕರ ಬಳಗದ ಅಧ್ಯಕ್ಷ ದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಬ್ಬಾಲೆ ಗ್ರಾ.ಪಂ ಅಧ್ಯಕ್ಷೆ ಅರುಣಾಕುಮಾರಿ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹೆಚ್.ಎಸ್.ಮಂಜುನಾಥ, ಗ್ರಾಮ ಪಂಚಾಯತಿ ಸದಸ್ಯ ಮಹದೇವ್, ಕೂಡಿಗೆ ಗ್ರಾ.ಪಂ ಸದಸ್ಯ ಟಿ.ಪಿ.ಹಮೀದ್, ಹೆಬ್ಬಾಲೆ ಗ್ರಾ.ಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಶೇಖರ್, ಹೆಚ್.ಟಿ.ದಿನೇಶ್, ಜೆ.ಡಿ.ಎಸ್ ಪ್ರಮುಖ ಹೆಚ್.ಜೆ.ಶರತ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ಪ್ರಮುಖರಾದ ಮಂಜುನಾಥ, ಗಿರೀಶ್, ಜಗದೀಶ್,ಯುವಕರ ಬಳಗದ ಗೌರವಾಧ್ಯಕ್ಷ ಹೆಚ್.ಟಿ.ಜಗದೀಶ್, ಕಾರ್ಯದರ್ಶಿ ಅರುಣ್ ಕುಮಾರ್, ಸಚಿನ್, ಸೇರಿದಂತೆ ಬಳಗ ನಿರ್ದೇಶಕರು, ಸದಸ್ಯರು ಗ್ರಾಮಸ್ಥರು ಹಾಜರಿದ್ದರು.
ವಿಜೇತ ತಂಡಗಳು :: ರಾಜ್ಯ ಮಟ್ಟದ ಗಾಡಿ ಓಟದ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹುಲಿ ಧ್ರುವ ತಂಡದ ಕರುಗಳು ಪ್ರಥಮ ಸ್ಧಾನ ಪಡೆದು, 20 ಸಾವಿರ ನಗದು ಹಾಗೂ ಟ್ರೋಫಿ, ಮೈಸೂರು ಜಿಲ್ಲೆಯ ಸೋಮಣ್ಣನ ಕರ ತಂಡ ದ್ವಿತೀಯ ಸ್ಥಾನ 15 ಸಾವಿರ ನಗದು ಮತ್ತು ಟ್ರೋಫಿ, ಮೈಸೂರು ಜಿಲ್ಲೆಯ ಶಂಕರ್ ಕರುಗಳ ತಂಡ ತೃತೀಯ ಸ್ಥಾನ ಹಾಗೂ ಸಾಲಿಗ್ರಾಮ ತಂಡವು ನಾಲ್ಕನೇ ಸ್ಥಾನ ಪಡೆದುಕೊಂಡಿತು. ಸ್ಥಳೀಯ ಗ್ರಾಮದ ರಾಸುಗಳಿಗೆ ನಡೆದ ಸ್ಪರ್ಧೆಯಲ್ಲಿ ಹಳೆಗೋಟೆ ಫಿರಂಗಿ ತಂಡಕ್ಕೆ ಪ್ರಥಮ ಸ್ಥಾನ 10 ಸಾವಿರ ನಗದು ಮತ್ತು ಟ್ರೋಫಿ, ಬೆಂಕಿ ವಿಕ್ರಮ, ಸೂರ್ಯ ದ್ವಿತೀಯ ಸ್ಥಾನ, ಚಂಪಾಕಲಿ ತಂಡವು ತೃತೀಯ ಸ್ಥಾನ ಪಡೆದುಕೊಂಡಿತು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲೆಯ ಹಸಿರು ಸೇನೆಯ ಘಟಕದ ಜಿಲ್ಲಾ ಅಧ್ಯಕ್ಷ ಶರತ್ ಕುಮಾರ್, ಹೆಚ್.ಟಿ.ದಿನೇಶ್, ಗಿರೀಶ್ ಬಹುಮಾನ ವಿತರಿಸಿದರು.