ಮಡಿಕೇರಿ ಜ.18 NEWS DESK : ಕವನ ವಾಚನ ಸ್ಪರ್ಧೆಯಲ್ಲಿ ಅಯ್ಯನೆರವಂಡ ಪ್ರಿತುನ್ ಪೂವಣ್ಣಗೆ ‘ಕರುನಾಡ ಕವಿರತ್ನ ‘ ಪ್ರಶಸ್ತಿ ಲಭಿಸಿದೆ.ಬೆಳಕು ಸಾಹಿತ್ಯ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್(ರಿ) ಸಂಸ್ಥೆಯು ರಾಯಚೂರಿನಲ್ಲಿ ನಡೆಸಿದ ರಾಷ್ಟಮಟ್ಟದ ಕನ್ನಡ ಕಲರವ ಸಮ್ಮೇಳನದಲ್ಲಿ ರಾಜ್ಯಮಟ್ಟದ ಕವನ ವಾಚನ ಸ್ಪರ್ಧೆಗೆ ಕೊಡಗಿನಿಂದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸಿದ ಪ್ರಿತುನ್ ಪೂವಣ್ಣಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಿತುನ್ ಪೂವಣ್ಣ ಕಕ್ಕಬ್ಬೆ ನಾಲಡಿ ಗ್ರಾಮದ ಪೂವಯ್ಯ, ಪ್ರಭಾ ದಂಪತಿಯ ಪುತ್ರ.