ನಾಪೋಕ್ಲು ಜ.15 NEWS DESK : ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು. ಮಕರ ಸಂಕ್ರಾಂತಿ ಅಂಗವಾಗಿ ಶ್ರೀ ಶಾಸ್ತಾವು ದೇವರಿಗೆ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಿತು. ಮಧ್ಯಾಹ್ನ ಶ್ರೀ ಶಾಸ್ತಾವು ದೇವರಿಗೆ ವಿಶೇಷ ಮಹಾಪೂಜೆ, ಮಹಾ ಮಂಗಳಾರತಿ ಜರುಗಿತು. ನಂತರ ಭಕ್ತಾಧಿಗಳಿಗೆ ತಿರ್ಥ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಪ್ರಮುಖರು ಸೇರಿದಂತೆ ಭಕ್ತಾದಿಗಳು ಹಾಜರಿದ್ದರು. ದೇವಾಲಯದ ಮುಖ್ಯ ಅರ್ಚಕ ದಿವಾಕರ ಭಟ್ ಪೂಜಾ ಕೈಂಕರ್ಯಗಳನ್ನು ನೆರವೇರಿದರು.
ವರದಿ : ದುಗ್ಗಳ ಸದಾನಂದ