ನಾಪೋಕ್ಲು ಜ.15 NEWS DESK : ಮಡಿಕೇರಿ ಶೌರ್ಯ ವಿಪತ್ತು ನಿರ್ವಹಣ ಘಟಕದ ವತಿಯಿಂದ ನಗರದ ಕನಕದಾಸ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಶಾಲಾ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದ ಘಟಕದ ಪ್ರಮುಖರು ಹಾಗೂ ಪದಾಧಿಕಾರಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣ ಘಟಕದ ಮೇಲ್ವಿಚಾರಕ ವಿನೋದ, ಜ್ಞಾನವಿಕಾಸದ ಮಾಲಿನಿ, ಸಂಯೋಜಕರಾದ ರೋಹಿಣಿ, ಲೀಲಾಶೇಷಮ್ಮ, ಮುನಿರ್ ಮಾಚರ್, ರವಿಕುಮಾರ್, ಹರಿಣಾಕ್ಷಿ, ಪ್ರೇಮಾ, ಯಶೋಧ, ಲತಾ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.