ಕುಶಾಲನಗರ, ಜ.21 NEWS DESK : ಕುಶಾಲನಗರ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜ ಹಾಗೂ ಬಸವೇಶ್ವರ
ದೇವಸ್ಥಾನ ಅಭಿವೃದ್ಧಿ ಸಮಿತಿಯ ವತಿಯಿಂದ ತ್ರಿದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 6ನೇ ಪುಣ್ಯ ಸ್ಮರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ನಂದೀಶ್,
ಸಾರ್ಥಕ ಜೀವನ ನಡೆಸಿದ ಡಾ ಶಿವಕುಮಾರ ಸ್ವಾಮೀಜಿ ಅವರು ಈ ಜಗತ್ತು ಕಂಡ ಶ್ರೇಷ್ಠ ಸಂತರಲ್ಲಿ ಒಬ್ಬರು. ಅವರು ಸಮಾಜಕ್ಕೆ ನೀಡಿದ ಶೈಕ್ಷಣಿಕ, ಧಾರ್ಮಿಕ ಹಾಗೂ ದಾಸೋಹಕ್ಕೆ ನೀಡಿದ ಕೊಡುಗೆಗಳು ಮಾದರಿಯಾದವು ಎಂದು ಬಣ್ಣಿಸಿದರು. ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ನೇತ್ರಾವತಿ, ನಿರ್ದೇಶಕ ಎಚ್.ಎಂ.ಮಧುಸೂದನ್ ಮಾತನಾಡಿದರು. ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಎಸ್.ಆರ್.ಶಿವಲಿಂಗ,ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ದೀಪು ಕರುಣಾಕರ್, ಅಕ್ಕನ ಬಳಗದ ಉಪಾಧ್ಯಕ್ಷೆ ಲತಾ, ಕಾರ್ಯದರ್ಶಿ ಎಚ್.ಪಿ.ಭಾಗೀರಥಿ (ಮನು), ನಿವೃತ್ತ ಶಿಕ್ಷಕರಾದ ಮಹಾದೇವಪ್ಪ, ಎಂ.ಎಸ್.ಗಣೇಶ್, ಶಿಕ್ಷಕರಾದ ಹುಲುಸೆ ಬಸವರಾಜ್, ಬಿ.ಬಿ.ಹೇಮಲತಾ, ಟಿ.ವಿ.ಶೈಲಾ, ಪ್ರಮುಖರಾದ ನಾಗರಾಜ್, ವಿಜಯ ಪಾಲಾಕ್ಷ, ಮನು, ಮಣಿ ಶಿವಣ್ಣ, ಸರೋಜ ಆರಾಧ್ಯ, ಲೇಖನ ಧರ್ಮಪ್ಪ, ವೀಣಾ ಇತರರು ಇದ್ದರು.