


ಮಡಿಕೇರಿ ಮಾ.8 NEWS DESK : ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಬಂಬುಕಾಡು ಹಾಡಿಗೆ ಗೋಣಿಕೊಪ್ಪ ಸಿಪಿಐ ಶಿವರಾಜ್ ಮುದೋಳ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಕಾನೂನು ಅರಿವು ಮೂಡಿಸಿದರು. ಪ್ರತಿ ಮನೆಗೆ ತೆರಳಿ ಸಾರ್ವಜನಿಕರ ಸಭೆ ನಡೆಸಿ ಹಾಡಿಗೆ ಇರುವ ಸರ್ಕಾರದ ಯೋಜನೆಗಳು, 112, ಮದ್ಯಪಾನ, ಮಾದಕ ವಸ್ತುಗಳ ಬಗ್ಗೆ, ಮಹಿಳೆಯರಿಗೆ ಕಾನೂನು ಅರಿವು, ಮಕ್ಕಳಿಗೆ ರಸ್ತೆ ಸುರಕ್ಷತೆ ಮತ್ತು ಜಾಗೃತಿ, ಪೋಕ್ಸೋ ಕಾಯ್ದೆ, ಸೈಬರ್ ಜಾಗೃತಿ, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.