ವಿರಾಜಪೇಟೆ ಮಾ.10 NEWS DESK : ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಂದನೇ ವಿಭಾಗದ ಕುಂದ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವೀಣಾ ಹಾಗೂ ರಮ್ಯಾ ಅವರು ತೀವ್ರ ತೊಂದರೆಗೆ ಒಳಗಾದ ಸಂದರ್ಭ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಭೇಟಿ ನೀಡಿ ವೈಯುಕ್ತಿಕ ಸಹಾಯ ಹಸ್ತ ಚಾಚಿದರು. ಬಾಡಿಗೆ ಮನೆಯ ಮಾಲೀಕರಿಗೆ ನೆರವಾಗುವ ಉದ್ದೇಶದಿಂದ ಶಾಸಕರ ಸೂಚನೆ ಮೇರೆಗೆ ಅವರ ಜೇಷ್ಠ ಸಹೋದರ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರೀರ ನವೀನ್ ಹಾಗೂ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಅಲಿರಾ ರಶೀದ್ ಅವರು ಶಾಸಕರಿಗೆ ವೈಯುಕ್ತಿಕ ಸಹಾಯ ಹಸ್ತ ಹಸ್ತಾಂತರಿಸುವ ಮೂಲಕ, ಮನೆಯವರಿಗೆ ಉಪಯೋಗವಾಗಲಿ ಎಂದು ಸಂಪೂರ್ಣ ಮನೆಯ ಮೇಲ್ಚಾವಣಿಯ ದುರಸ್ತಿಗೆ ಅಗತ್ಯವಿರುವ ಟಾಟಾ ಶೀಟ್‍ಗಳನ್ನು ಒದಗಿಸಿದರು.











