Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ : ಬಿರುನಾಣಿಯಲ್ಲಿ ಸಿಎನ್‍ಸಿಯಿಂದ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ : ಬಿರುನಾಣಿಯಲ್ಲಿ ಸಿಎನ್‍ಸಿಯಿಂದ ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಂಡನೆ*

ಏಪ್ರಿಲ್ 1, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.1 NEWS DESK : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಿರುನಾಣಿಯಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು. ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‍ಟಿ ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‍ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಸಿಕೊಡಬೇಕೆಂದು ಒತ್ತಾಯಿಸಿದರು.   ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ 1871-72ರಿಂದ 1931ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು. ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು. ಮೂವರು ಪ್ರಭಾವಿ ರಾಜಕಾರಣಿಗಳು ಸುಳ್ಯದಲ್ಲಿನ ತಮ್ಮ ಭದ್ರಕೋಟೆಯನ್ನು ಕೊಡವಲ್ಯಾಂಡ್‍ನೊಂದಿಗೆ ವಿಲೀನಗೊಳಿಸುವ ಒಳಸಂಚು ರೂಪಿಸಿದ್ದು, ಈ ಪ್ರಯತ್ನದಿಂದಾಗಿ ಸಂಸತ್ ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ಆರೋಪಿಸಿದರು. ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಂತೆ ಸೇನೆಗೆ ಸೇರುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಕೊಡವರು ಕಾಪಾಡುತ್ತಿದ್ದಾರೆ. ಕಟ್ಟುನಿಟ್ಟಾದ ಕುಟುಂಬ ಯೋಜನೆಯ ಪಾಲನೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೊಡವರು ಮಹತ್ವದ ಪಾತ್ರ ವಹಿಸಿದ್ದಾರೆ. ಆದಿಮಸಂಜಾತ ಕೊಡವ ಸಮುದಾಯ ನೀಡಿರುವ ಮತ್ತು ನೀಡುತ್ತಿರುವ ವಿಶಿಷ್ಟ ಕೊಡುಗೆಗಳನ್ನು ಸರ್ಕಾರ ಪರಿಗಣಿಸಬೇಕು. ವಿಶೇಷವಾಗಿ ಅತೀ ಸಣ್ಣ ಕೊಡವ ಜನಾಂಗದ ವಿಚಾರದಲ್ಲಿ ಜನಸಂಖ್ಯೆಯು ಕ್ಷೇತ್ರ ಮರುವಿಂಗಡಣೆಗೆ ಏಕೈಕ ಮಾನದಂಡವಾಗಿರಬಾರದು ಎಂದರು.  ಕೊಡವ ಸಮುದಾಯ ಕೊಡವಲ್ಯಾಂಡ್ ಗೆ ಸೀಮಿತವಾದ ಒಂದು ವಿಶಿಷ್ಟ ಜನಾಂಗವಾಗಿದೆ. ಕೊಡವಲ್ಯಾಂಡ್ ಕೊಡವರ ಸಾಂಪ್ರದಾಯಿಕ ಮತ್ತು ಪೂರ್ವಜರ ತಾಯ್ನಾಡಾಗಿದೆ. ಕಾಶ್ಮೀರಿ ಪಂಡಿತರು, ರೆಡ್ ಇಂಡಿಯನ್ನರು, ಟಿಬೆಟಿಯನ್ ಬೂತಿಯಾಗಳು, ಸ್ಕಾಟಿμï ಜನಾಂಗ, ಸೆಲ್ಟಿಕ್ ಜನಾಂಗ ಮತ್ತು ಕುರ್ದಿಶ್ ಜನರಿಗೆ ಸಮನಾಂತರವಾದ ಆದಿಮಸಂಜಾತ ಜನಾಂಗಕ್ಕೆ ಸೇರಿದ ಕೊಡವರಿಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ನೀಡುವ ಅನಿವಾರ್ಯತೆ ಇದೆ. ಭಾರತೀಯ ಸಂವಿಧಾನದ 6 ಮತ್ತು 8 ನೇ ಶೆಡ್ಯೂಲ್ ಪಟ್ಟಿಗಳೊಂದಿಗೆ ವಿಧಿ 244 ಮತ್ತು 371ನೇ ವಿಧಿ ಬುಡಕಟ್ಟು ಪ್ರದೇಶಗಳ ಆಡಳಿತ ಹಾಗೂ ಭಾಷೆಗಳ ಗುರುತಿಸುವಿಕೆಯನ್ನು ಕ್ರಮವಾಗಿ ಒದಗಿಸುತ್ತದೆ.  1871-72 ರಿಂದ 1931 ರವರೆಗಿನ ಬ್ರಿಟಿಷ್ ಸರ್ಕಾರದ ಅವಧಿಯ ಜನಗಣತಿ ಕಾರ್ಯಾಚರಣೆಗಳು ಕೊಡವರನ್ನು ಪ್ರತ್ಯೇಕ ಜನಾಂಗ ಮತ್ತು ಸಮುದಾಯವೆಂದು ಗುರುತಿಸಿ ಕೂರ್ಗಿಸ್ ಅಥವಾ ಕೊಡವರು ಎಂದೂ ಕರೆಯಲಾಯಿತು. ಇದು ನಾಲ್ಕು ವರ್ಣಗಳ ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ಸಂಬಂಧಗಳಿಂದ ಭಿನ್ನವಾಗಿದೆ. 1941 ರಿಂದ ಜನಗಣತಿ ನಡೆಸಿದವರು ಕೊಡವರನ್ನು ಅಸ್ತಿತ್ವವಲ್ಲದ ಘಟಕವಾಗಿ ದಾಖಲಿಸಲು ಪ್ರಾರಂಭಿಸಿದವು. ಅವರ ಸ್ಥಾನಮಾನವನ್ನು ಒಂದು ಅನನ್ಯ ಮತ್ತು ಸ್ವತಂತ್ರ ಸಮುದಾಯಕ್ಕಿಂತ ಕೇವಲ ಜಾತಿಗೆ ಇಳಿಸಿದವು. ಈ ತಪ್ಪು ನಿರೂಪಣೆ 2011 ರ ಜನಗಣತಿಯವರೆಗೂ ಮುಂದುವರೆದಿದ್ದು, ಕೊಡವ ಸಮುದಾಯದ ಗುರುತು, ಸಂಸ್ಕೃತಿ ಮತ್ತು ಭವಿಷ್ಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ.  ಜನಸಂಖ್ಯಾ ವಿಜ್ಞಾನದ ಮತ್ತು ಮಾನವ ಶಾಸ್ತ್ರದ ಜಾಗತಿಕ ನಕ್ಷೆಯಿಂದ ಆದಿಮಸಂಜಾತ ಕೊಡವ ಜನಾಂಗವನ್ನು ಅಳಿಸಿ ಹಾಕಿದ ಕ್ರಮವನ್ನು ಜನಾಂಗೀಯ ನರಮೇಧ, ಜನಾಂಗೀಯ ಶುದ್ಧೀಕರಣ ಮತ್ತು ನಿರ್ನಾಮದ ಒಂದು ರೂಪವೆಂದು ಪರಿಗಣಿಸುತ್ತದೆ. ಇದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮಾವೇಶದ ತತ್ವಗಳನ್ನು ಉಲ್ಲಂಘಿಸುವ ಅಮಾನವೀಯ, ಸಂವಿಧಾನಬಾಹಿರ ಮತ್ತು ಅನ್ಯಾಯದ ಕೃತ್ಯವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.  ವಿಶಿಷ್ಟ ಜನಾಂಗೀಯ ಗುಂಪಾದ ಕೊಡವರ ಸೂಕ್ತ ಸ್ಥಾನವನ್ನು ಕಸಿದುಕೊಂಡ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕು. ಕೊಡವರನ್ನು ಮೂಲ ವಂಶಸ್ಥ ಕೊಡವ ಸಮುದಾಯಕ್ಕೆ ಸೀಮಿತಗೊಳಿಸಿದ ಏಕ ಮತ್ತು ವಿಭಿನ್ನ ಜನಾಂಗೀಯ ಗುಂಪು ಎಂದು ಗುರುತಿಸಬೇಕು. ಕೊಡವರಿಗೆ ಸಂಬಂಧಿಸಿದಂತೆ ಜಾತಿಯ ಯಾವುದೇ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.  ಕೊಡವ ಜನಾಂಗವು ಒಂದೇ ಜನಾಂಗ. ಕೊಡವ ಸಮುದಾಯದಲ್ಲಿ ಯಾವುದೇ ಷರತ್ತು, ಉಪ-ಷರತ್ತು, ಉಪ-ಪಂಗಡ ಅಥವಾ ಉಪ-ಜಾತಿ ಇಲ್ಲ. ನಾವು ಕೊಡವ ಜನಾಂಗದವರು ಮತ್ತು ನಮ್ಮ ತಾಯಿ ಬೇರುಗಳು ಕೊಡವಲ್ಯಾಂಡ್‍ಗೆ ಮಾತ್ರ ಸೀಮಿತವಾಗಿವೆ. ಕೊಡವಲ್ಯಾಂಡ್‍ನ ಹೊರಗೆ, ನಮ್ಮ ಯಾವುದೇ ಸಾಂಸ್ಕೃತಿಕ ಬೇರುಗಳಿಲ್ಲ. ಪ್ರಾಚೀನ ಕಾಲದಿಂದ ಇಂದಿನವರೆಗೆ, ನಾವು ಒಂದು ಜನಾಂಗವಾಗಿ ನಮ್ಮ ವಿಶಿಷ್ಟ ಗುರುತನ್ನು ಉಳಿಸಿಕೊಂಡಿದ್ದೇವೆ. ಕೊಡವರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, 1941-2011 ರ ಜನಗಣತಿ ಎಣಿಕೆಗಳನ್ನು ರದ್ದುಗೊಳಿಸಲು ಮತ್ತು 1871-72 ರಿಂದ 1931 ರ ಜನಗಣತಿ ಎಣಿಕೆಗಳಲ್ಲಿ ಪ್ರತಿಫಲಿಸಿದಂತೆ ಕೊಡವ ಸಮುದಾಯದ ಅಧಿಕೃತ ಪ್ರಾತಿನಿಧ್ಯವನ್ನು ಪುನಃಸ್ಥಾಪಿಸಲು ಸಿಎನ್‍ಸಿ ಒತ್ತಾಯಿಸುತ್ತದೆ ಎಂದರು.  ಕೊಡವರನ್ನು ವಿಶಿಷ್ಟ ಜನಾಂಗವೆಂದು ಗುರುತಿಸಬೇಕು, ಜನಗಣತಿ ವರ್ಗೀಕರಣದ ತಿದ್ದುಪಡಿಯಾಗಬೇಕು ಮತ್ತು ಕೊಡವರನ್ನು ಜಾತಿ ಎಂದು ತಪ್ಪಾಗಿ ದಾಖಲಿಸಬಾರದು. ವಿಶ್ವಸಂಸ್ಥೆಯ ಆದಿಮಸಂಜಾತ ಹಕ್ಕುಗಳ ಅಡಿಯಲ್ಲಿ ಮಾನ್ಯತೆ ನೀಡಬೇಕು. ಇತಿಹಾಸದುದ್ದಕ್ಕೂ ಹೊರಗಿನ ಆಡಳಿತಗಾರರು ವಶಪಡಿಸಿಕೊಂಡಿದ್ದ ಕೊಡವರ ಪ್ರಾಚೀನ ಮತ್ತು ಪಾರಂಪರಿಕ ಭೂಮಿಯನ್ನು ಮರುಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದರು ಅಣ್ಣಳಮಾಡ ಹರಿಣಿ ದೇವಮ್ಮ, ಅಣ್ಣಳಮಾಡ ಹರ್ಷಿತಾ ದೇವಮ್ಮ, ಕೇಚಮಾಡ ಶಿಲ್ಪ್ಪ, ಕೇಚಮಾಡ ಶ್ರದ್ಧಾ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಬೊಳ್ಳೇರ ವಾಸು, ಬೊಳ್ಳೇರ ಕುಮಾರ್, ಬೊಳ್ಳೇರ ರಘು, ಬೊಳ್ಳೇರ ಮುತ್ತಣ್ಣ, ಬೊಜ್ಜಂಗಡ ನಂದ ನಟರಾಜ್, ಅಣ್ಣಳಮಾಡ ಲಾಲಾ ಅಪ್ಪಣ್ಣ, ಮಾಣಿರ ಗಣೇಶ್, ಅಣ್ಣಳಮಾಡ ರಂಜನ್, ಬೊಟ್ಟಂಗಡ ಸೋಮಣ್ಣ, ಮೀದೇರಿರ ಜಪ್ಪು, ಕೀಕನಮಾಡ ಮನು, ಗುಡ್ಡಮಾಡ ಸುಬ್ರಮಣಿ, ಗುಡ್ಡಮಾಡ ಬೋಪಣ್ಣ, ಕಲ್ಕಂಡ ಅರಸು, ಕಲ್ಕಂಡ ರಾಮು, ಚೇರಂಡ ಪಾಪು ಕಾರ್ಯಪ್ಪ, ಕರ್ತಮಾಡ ನರೇಂದ್ರ, ಕರ್ತಮಾಡ ಜಾಜ, ಅಣ್ಣಳಮಾಡ ಸುಬ್ಬಯ್ಯ, ಕೀಕನಮಾಡ ಹರೀಶ್, ಬೊಟ್ಟಂಗಡ ರಂಜಿ, ಕಾಳಿಮಾಡ ನಾಚಪ್ಪ, ಕಾಳಿಮಾಡ ಕೃಷ್ ಕುಶಾಲಪ್ಪ, ಕಾಳಿಮಾಡ ರಮೇಶ್ ತಿಮ್ಮಯ್ಯ, ಕರ್ತಮಾಡ ನೀಲಕಂಠ, ಕರ್ತಮಾಡ ಡಾಲಿ ಕಾಳಪ್ಪ, ಅಣ್ಣಳಮಾಡ ಉತ್ತಪ್ಪ, ಚಂಗನಮಾಡ ನಾಣಿ ಅಪ್ಪಣ್ಣ, ಕುಪ್ಪನಮಾಡ ರಘು, ಮಲ್ಲೇಂಗಡ ಮೋಟಯ್ಯ, ಕರ್ತಮಾಡ ಚಿಟ್ಟಿಯಪ್ಪ, ಅಣ್ಣಳಮಾಡ ಸುಬ್ರಮಣಿ, ಕುಪ್ಪನಮಾಡ ಅರುಣ, ಕಲ್ಕಂಡ ದೇವಯ್ಯ, ಗುಡ್ಡಮಾಡ ಅರಸು ಭೀಮಯ್ಯ, ಚೊಟ್ಟಂಗಡ ಶ್ಯಾಂ, ಕಾಳಿಮಾಡ ಪವನ್, ಕಾಳಿಮಾಡ ನಾಚಪ್ಪ, ಬೊಟ್ಟಂಗಡ ರಾಜು, ಮಲ್ಲೇಂಗಡ ಸುಬ್ರಮಣಿ, ಅಣ್ಣಳಮಾಡ ಚಿಣ್ಣಪ್ಪ, ಕರ್ತಮಾಡ ಕುಟ್ಟಪ್ಪ, ಕರ್ತಮಾಡ ರಾಯ್, ಕುಪ್ಪಣಮಾಡ ಜೀವನ್, ಚೊಟ್ಟಂಗಡ ಬೋಸು, ಕರ್ತಮಾಡ ಗಣಪತಿ, ಕಾಳಿಮಾಡ ಸಂತೋಷ ಭೀಮಯ್ಯ, ಕರ್ತಮಾಡ ಸುಜನ್, ನೆಲ್ಲಿರ ರೋಷನ್, ಕರ್ತಮಾಡ ಡಾಲಿ, ಬೊಳ್ಳೇರ ರಾಮು, ಕೀಕಣಮಾಡ ಸುರೇಶ್, ಕಳ್ಕಂಡ ಪ್ರಸಾದ್ ಪೊನ್ನಪ್ಪ, ಕೇಚಮಾಡ ಶರತ್, ಕೇಚಮಾಡ ಚಿಟ್ಟಿಯಪ್ಪ, ಗುಡ್ಡಮಾಡ ನಾಚಯ್ಯ, ಕುಪ್ಪಣಮಾಡ ಉಮೇಶ್, ಕುಪ್ಪಣಮಾಡ ಮೇದಪ್ಪ, ಕುಪ್ಪಣಮಾಡ ಬೋಪಯ್ಯ, ನೆಲ್ಲಿರ ಬೊಳ್ಳಿಯಪ್ಪ, ಕುಪ್ಪಣಮಾಡ ಪೂಣಚ್ಚ, ಗುಡ್ಡಮಾಡ ವಿಷ್ಣು, ಕಳಕಂಡ ಹ್ಯಾರಿ ಕಾರ್ಯಪ್ಪ, ಕರ್ತಮಾಡ ಸುಗು ನಾಣಯ್ಯ, ಕಾಳಿಮಾಡ ಭೀಮಯ್ಯ, ಕಳಕಂಡ ಪ್ರಕಾಶ್, ಅಣ್ಣಳಮಾಡ ಗಿರೀಶ್, ಅಣ್ಣಳಮಾಡ ಮಂಜು, ಕರ್ತಮಾಡ ಮೋಹನ್,  ಕರ್ತಮಾಡು ನಂದಾ ಮತ್ತಿತರರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾಲ್ಗೊಂಡು ಹಕ್ಕೊತ್ತಾಯ ಮಂಡಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.