




ಮೈದಾನ 1 : : ಕುಂದಿರ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪೊನ್ನಿಮಾಡ ತಂಡ ಗೆಲುವು ದಾಖಲಿಸಿತು. ಪೊನ್ನಿಮಾಡ ಪರ ಸಂತೋಷ್ ಪೂವಯ್ಯ ಹಾಗೂ ನಾಚಪ್ಪ ತಲಾ 1 ಗೋಲು ದಾಖಲಿಸಿದರು. ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಟ್ಟಂಗಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಕುಟ್ಟಂಡ ತಂಡ 3-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಕುಟ್ಟಂಡ ತಂಡದ ರಜೀನ ಬಿದ್ದಪ್ಪ 2 ಹಾಗೂ ಸಂದೀಪ್ ಬಿದ್ದಪ್ಪ 1 ಗೋಲು ದಾಖಲಿಸಿದರು. ಸುರೇಂದ್ರ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಲೆಂಗಡ ಮತ್ತು ಕನ್ನಂಬಿರ ನಡುವಿ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕನ್ನಂಬಿರ ಜಯ ಸಾಧಿಸಿತು. ಕನ್ನಂಬಿರ ತಂಡದ ಪವನ್ ಪೂವಯ್ಯ, ಬಿಶನ್ ಬೋಪಣ್ಣ ಹಾಗೂ ರೋಹನ್ ಕುಟ್ಟಪ್ಪ ತಲಾ 1 ಗೋಲು ದಾಖಲಿಸಿದರು. ಪಾಲೆಂಗಡ ತಂಡದ ಪರ ಸುನೀಲ್ ಚಂಗಪ್ಪ 1 ಗೋಲು ಬಾರಿಸಿದರು. ಪಾಲೆಂಗಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪುಟ್ಟಿಚಂಡ ಮತ್ತು ಕುಟ್ಟೇಟಿರ ನಡುವಿನ ಪಂದ್ಯದಲ್ಲಿ ಪುಟ್ಟಿಚಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪುಟ್ಟಿಚಂಡ ಪೆಮ್ಮಯ್ಯ 1 ಗೋಲು ದಾಖಲಿಸಿದರು. ಕುಟ್ಟೇಟಿರ ಮಾದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೈರೇಟಿರ ಮತ್ತು ಪಳೆಯಂಡ (ಹಮ್ಮಿಯಾಲ) ಬೈರೇಟಿರ ತಂಡ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಬೈರೇಟಿರ ಲವಿನ್ ಗೋಲು ದಾಖಲಿಸಿದರು. ಪಳೆಯಂಡ ರಿತಿಕ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಂದಂಗಡ ಮತ್ತು ಅಯ್ಯಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಂದಂಗಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮಂದಂಗಡ ತಂಡದ ಪರ ವಿಖ್ಯಾತ್ ಮಂದಣ್ಣ 2, ಚಿರನ್ ಚಂಗಪ್ಪ ಹಾಗೂ ಪ್ರಥಮ್ ಪೊನ್ನಣ್ಣ ತಲಾ 1 ಗೋಲು ದಾಖಲಿಸಿದರು. ಅಯ್ಯಮಂಡ ಪ್ರವೀಣ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಂಡೇಡ ಮತ್ತು ದೇಯಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮಂಡೇಡ ಜಯ ಸಾಧಿಸಿತು. ಮಂಡೇಡ ಪರ ಮುದ್ದಪ್ಪ, ಗಿರೀಶ್ ಕಾವೇರಪ್ಪ ಹಾಗೂ ಅಚ್ಚಯ್ಯ ತಲಾ 1 ಗೋಲು ದಾಖಲಿಸಿದರು. ಸಂಜು ಸೋಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 2 :: ಅನ್ನಡಿಯಂಡ ಮತ್ತು ಬಟ್ಟಕಾಳಂಡ ವಾಕ್ ಓವರ್‍ನಲ್ಲಿ ಅನ್ನಡಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಚೇರಂಡ ಮತ್ತು ಚೆನ್ನಪಂಡ ನಡುವಿನ ಪಂದ್ಯ ಯಾವುದೇ ಗೋಲು ದಾಖಲಾಗದೆ ಡ್ರಾ ಆದ ಕಾರಣ ಟೈ ಬ್ರೇಕರ್‍ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೇರಂಡ ತಂಡ ಜಯ ಸಾಧಿಸಿತು. ಚೆನ್ನಪಂಡ ಪ್ರಕಾಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ನಂದಿನೆರವಂಡ ಮತ್ತು ಐತಿಚಂಡ ನಡುವಿನ ಪಂದ್ಯದಲ್ಲಿ ಐತಿಚಂಡ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಐತಿಚಂಡ ತಂಡದ ಡಿಮ್‍ಸನ್ ಪಳಂಗಪ್ಪ ಹಾಗೂ ಸಜನ್ ವಸಂತ್ ತಲಾ 1 ಗೋಲು ದಾಖಲಿಸಿದರು. ನಂದಿನೆರವಂಡ ಸೂರಜ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುಂಡಂಡ ಮತ್ತು ಅಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಅಮ್ಮಂಡ ತಂಡ ಗೆಲುವು ದಾಖಲಿಸಿತು. ಅಮ್ಮಂಡ ತಂಡದ ಕಾರ್ಯಪ್ಪ 2, ಎ.ಸಿ.ಸೋಮಣ್ಣ ಹಾಗೂ ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ಮುಂಡಂಡ ಕೌಶಿಕ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಟ್ಟೆರ ಮತ್ತು ಮಾಳೇಟಿರ (ಕೆದಮುಳ್ಳೂರು) ನಡುವಿನ ಪಂದ್ಯದಲ್ಲಿ ಮಾಳೇಟಿರ 5-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮಾಳೇಟಿರ ತಂಡದ ಜಯ ಜೀವನ್, ವಿಕಾಸ್ ಮುದ್ದಪ್ಪ, ಯಶ್ ಕರುಂಬಯ್ಯ, ಕಿಲನ್ ಮುತ್ತಪ್ಪ ಹಾಗೂ ಕಾಳಪ್ಪ ತಲಾ 1 ಗೋಲು ಬಾರಿಸಿದರು. ಕಟ್ಟೇರ ನಿರನ್ ಉತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೇಂದ್ರಿಮಾಡ ಮತ್ತು ಸುಳ್ಳಿಮಾಡ ನಡುವಿನ ಪಂದ್ಯದಲ್ಲಿ ಸುಳ್ಳಿಮಾಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಸುಳ್ಳಿಮಾಡ ತಂಡದ ಬೋಪಣ್ಣ, ಸಜು ಬಿದ್ದಪ್ಪ, ಆಶಿಕ್ ಪೂಣಚ್ಚ ಹಾಗೂ ಭಜನ್ ದೇವಯ್ಯ ತಲಾ 1 ಗೋಲು ದಾಖಲಿಸಿದರು. ಚೇಂದ್ರಿಮಾಡ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುಂಡೋಟಿರ ಮತ್ತು ಚೋಡುಮಾಡ ನಡುವಿನ ಪಂದ್ಯದಲ್ಲಿ ತಲಾ 2 ಗೋಲುಗಳ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಚೋಡುಮಾಡ ತಂಡ ಗೆಲುವು ದಾಖಲಿಸಿತು. ಚೇತನ್ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 3 :: ಚೋಕಿರ ಮತ್ತು ವಲ್ಲಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಚೋಕಿರ ಜಯ ಸಾಧಿಸಿತು. ಚೋಕಿರ ತಂಡದ ಪರ ಚಿರಾಗ್ ಕಾರ್ಯಪ್ಪ 2 ಹಾಗೂ ಅಯ್ಯಪ್ಪ 1 ಗೋಲು ಬಾರಿಸಿದರು. ವಲ್ಲಂಡ ತಂಡದ ಪರ ಧನೀಶ್ ಪೊನ್ನಣ್ಣ 1 ಗೋಲು ದಾಖಲಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೊಟ್ಟೆಯಂಡ ಮತ್ತು ತೆಕ್ಕಡ ನಡುವಿನ ಪಂದ್ಯದಲ್ಲಿ ತೆಕ್ಕಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ತೆಕ್ಕಡ ತಂಡದ ವರುಣ್ 2 ಗೋಲು ದಾಖಲಿಸಿದರು. ಚೊಟ್ಟೆಯಂಡ ದಂಡದ ಕ್ಯಾಪ್ಟನ್ ಸಂಜು ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಕಾಯಪಂಡ ಮತ್ತು ಉಪ್ಪಂಗಡ ನಡುವಿನ ಪಂದ್ಯದಲ್ಲಿ ಕಾಯಪಂಡ 5-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕಾಯಪಂಡ ಪರ ಸಚಿನ್ 2, ಪ್ರತಿಕ್ ಕುಶಾಲಪ್ಪ, ಪೂವಣ್ಣ ಹಾಗೂ ಚಿರಾಗ್ ದೇವಯ್ಯ ತಲಾ 1 ಗೋಲು ದಾಖಲಿಸಿದರು. ಉಪ್ಪಂಗಡ ಸ್ವಾತಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಾಳೇಟಿರ (ಕುಕ್ಲೂರು) ಮತ್ತು ಅವರೆಮಾದಂಡ ತಂಡಗಳ ನಡುವಿ ಪಂದ್ಯದಲ್ಲಿ ಮಾಳೇಟಿರ ತಂಡ 1-0 ಗೋಲು ಅಂತರದಲ್ಲಿ ಗೆಲುವು ದಾಖಲಿಸಿತು. ಮಾಳೇಟಿರ ಹೃತಿಕ್ ಮುತ್ತಣ್ಣ 1 ಗೋಲು ಬಾರಿಸಿದರು. ಅವರೆಮಾದಂಡ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಾವಾಡಿಚಂಡ ಮತ್ತು ಕಾಳಚಂಡ ನಡುವಿನ ಪಂದ್ಯದಲ್ಲಿ ಕಾವಾಡಿಚಂಡ 3-0 ಗೋಲುಗಳ ಅಂತರದಿಂದ ಜಯಸಾಧಿಸಿತು. ಕಾವಾಡಿಚಂಡ ತಂಡದ ಅಭಿಷೇಕ್ ಬೋಪಯ್ಯ, ಕೀರ್ತನ್ ಕುಶಾಲಪ್ಪ ಹಾಗೂ ಪವನ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಕಾಳಚಂಡ ಅಭಿಜ್ಞಾ ಚೋಂದಮ್ಮ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೇಕೇರಿರ ಮತ್ತು ಕೈಬುಲಿರ ತಂಡಗಳ 4-0 ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ ತಂಡದ ನೆಹಲ್ ತಮಯ್ಯ ಹಾಗೂ ರೋನಕ್ ತಿಮ್ಮಯ್ಯ ತಲಾ 2 ಗೋಲು ದಾಖಲಿಸಿದರು. ಕೈಬುಲಿರ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ತೋಲಂಡ ಮತ್ತು ಉಳ್ಳಿಯಡ ವಾಕ್ ಓವರ್‍ನಲ್ಲಿ ಉಳ್ಳಿಯಡ ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.