







ಮಡಿಕೇರಿ ಏ.7 NEWS DESK : ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್ ನ 2025 ನೇ ಯೂತ್ ಫೋರಂ ಗೆ ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಪ್ರತಿನಿಧಿಯಾಗಿ ಭಾರತದಿಂದ ಆಯ್ಕೆಯಾಗಿದ್ದಾರೆ. ಈ ಸಮಾವೇಶದಲ್ಲಿ ಜಗತ್ತಿನ 138 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಮಡಿಕೇರಿಯ ಯದೀಶ್ ಅವರಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದೆ. ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್.ರಮೇಶ್ ರಮ್ಯ ಕೆ.ಆರ್. ದಂಪತಿ ಪುತ್ರರಾಗಿರುವ ಯದೀಶ್ ಅಮೇರಿಕಾದ ಬೋಸ್ಟನ್ ನ ನಾಥ್೯ ಈಸ್ಟರನ್ ಯೂನಿವಸಿ೯ಟಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಏಪ್ರಿಲ್ 15 ರಿಂದ 17 ರವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಅಭಿವೃದ್ಧಿಶೀಲ ವಿಜ್ಞಾನ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಅಭಿವೃದ್ಧಿಶೀಲತೆಯನ್ನು ಹೆಚ್ಚಿಸುವುದು” ಎಂಬ ವಿಷಯದ ಅಡಿಯಲ್ಲಿ ಯೂತ್ ಫೋರಂ ಆಯೋಜಿಸಲ್ಪಟ್ಟಿದೆ. ಯುನೈಟೆಡ್ ನೇಷನ್ಸ್ ಎಕಾನಾಮಿಕ್ ಅಂಡ್ ಸೋಶಿಯಲ್ ಕೌನ್ಸಿಲ್ ಯೂತ್ ಫೋರಮ್ ಯುವಜನರಿಗೆ ಸದಸ್ಯ ರಾಷ್ಟ್ರಗಳೊಂದಿಗೆ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಸೂಕ್ತ ವೇದಿಕೆಯನ್ನು ನೀಡುತ್ತಿದೆ. ಯುವಪೀಳಿಗೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಲಿಂಗ ಸಮಾನತೆ ಸೇರಿದಂತೆ ಅನೇಕ ವಿದ್ಯಾಮಾನಗಳ ಸಂಬಂಧಿತ ಚಚೆ೯ಯೂ ಈ ಪ್ರತಿಷ್ಟಿತ ವೇದಿಕೆಯಲ್ಲಿ ನಡೆಯಲಿದೆ. ಈ ಪ್ರತಿಷ್ಟಿತ ಶೃಂಗಸಭೆಗೆ ಭಾರತದ ಪ್ರತಿನಿಧಿಯಾಗಿ ಯದೀಶ್ ರಮೇಶ್ ಪಾಲ್ಗೊಳ್ಳುತ್ತಿದ್ದಾರೆ.