ವಿರಾಜಪೇಟೆ ಮೇ 6 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್(ರಿ)ವಿರಾಜಪೇಟೆ ತಾಲೂಕು, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಶ್ರೀ ಮಹಾದೇವರ ಪೆಗ್ಗೆರೆ ಕೆರೆ ಕಾಮಗಾರಿಯ ಪೂರ್ವಭಾವಿ ಸಭೆ ನಡೆಯಿತು. ತಾಲೂಕಿನ ಯೋಜನಾಧಿಕಾರಿಗಳಾದ ಹರೀಶ್ ಪಿ. ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಕೆರೆ ಕಾಮಗಾರಿ ಹೂಳು ಎತ್ತುವುದು, ಕೆರೆ ಹೂಳು ತೆಗೆಯುವುದರಿಂದ ಆಗುವ ಪ್ರಯೋಜನ, ಕುಡಿಯುವ ನೀರು ಮತ್ತು ಕೃಷಿ ಭೂಮಿಗಳಿಗೆ ಪೂರಕವಾಗುತ್ತದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರುಣ್ ಬಾನಂಗಡ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಕೆರೆ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯುಕ್ರಮದಲ್ಲಿ ಈ ಮಹಾದೇವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಿ.ಜಿ ಕರುಂಬಯ್ಯ, ಊರಿನ ತಕ್ಕ ಮುಖ್ಯಸ್ಥ ಪೃಥ್ವಿ ಸುಬ್ಬಯ್ಯ, ಹುದಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿವ್ಯ ಕಾವೇರಮ್ಮ, ಪಂಚಾಯತ್ ಸದಸ್ಯ ಮಿಲನ್, ಹುದಿಕೇರಿ ಒಕ್ಕೂಟದ ಅಧ್ಯಕ್ಷ ರಾಧಾ ವಲಯ, ಮೇಲ್ವಿಚಾರಕ ನಾಗರಾಜ್, ಕೃಷಿ ಮೇಲ್ವಿಚಾರಕ ವಸಂತ, ಸೋಮವಾರಪೇಟೆ ಕೃಷಿ ಮೇಲ್ವಿಚಾರಕ ಹರೀಶ್, ಒಕ್ಕೂಟದ ಪದಾಧಿಕಾರಿಗಳು ಊರಿನ ಗ್ರಾಮಸ್ಥರು ದೇವಸ್ಥಾನ ಸಮಿತಿಯವರು ಈ ಕಾರ್ಯಕ್ರಮದಲ್ಲಿ ಇದ್ದರು.











