ಮಡಿಕೇರಿ ಮೇ 20 NEWS DESK : ಸಮಾಜದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2026ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೋತ್ಸವದ ಹಿಂದಿನ ದಿನದಂದು ಕೇಂದ್ರ ಸರ್ಕಾರದಿಂದ ಪ್ರಕಟಿಸಲಾಗುತ್ತದೆ. ಕಲೆ(ಜನಪ್ರಿಯ ಕಲೆ, ಸಂಗೀತ, ಚಿತ್ರಕಲೆ, ವಾಸ್ತುಶಿಲ್ಪ, ಶಿಲ್ಪಕಲೆ, ಚಲನಚಿತ್ರ, ಛಾಯಾಗ್ರಹಣ ಮತ್ತಿತರ), ಸಮಾಜದ ಕಾರ್ಯ(ಸಮಾಜ ಸೇವೆ, ಧರ್ಮಾರ್ಥ ಸೇವೆ, ಸಮುದಾಯ ಯೋಜನೆಯ ನಿಮಿತ್ತದ ಕೊಡುಗೆ ಒಳಗೊಂಡಂತೆ), ಸಾರ್ವಜನಿಕ ವ್ಯವಹಾರ(ಕಾನೂನು ಮತ್ತು ಸಾರ್ವಜನಿಕ ಜೀವನ ರಾಜಕೀಯ ಇತ್ಯಾದಿ), ವಿಜ್ಞಾನ, ತಾಂತ್ರಿಕ, ತಂತ್ರಜ್ಞಾನ ಮತ್ತು ಇತರ ಗೌರವಾನ್ವಿತ ವೃತ್ತಿ (ಬಾಹ್ಯಾಕಾಶ, ಎಂಜಿನಿಯರಿಂಗ್, ಅಣುವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಇತ್ಯಾದಿ), ವ್ಯಾಪಾರ ಮತ್ತು ಕೈಗಾರಿಕೆ(ಬ್ಯಾಂಕಿಂಗ್, ಆರ್ಥಿಕ ಚಟುವಟಿಕೆ, ಮ್ಯಾನೇಜ್‍ಮೆಂಟ್, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ವಾಣಿಜ್ಯ ಒಳಗೊಂಡಂತೆ), ವೈದ್ಯಕೀಯ(ವೈದ್ಯಕೀಯ ಸಂಶೋಧನೆ, ಆಯರ್ವೇದದಲ್ಲಿ ಕುಶಲತೆ, ಹೋಮಿಯೋಪತಿ, ಸಿದ್ದ, ಅಲೋಪತಿ, ನ್ಯಾಚುರೋಪತಿ ಮತ್ತಿತರ), ಸಾಹಿತ್ಯ ಮತ್ತು ಶಿಕ್ಷಣ(ಪತ್ರಿಕೋದ್ಯಮ, ಭೋದನೆ, ಪುಸ್ತಕ ಬರೆಯುವಿಕೆ, ಸಾಹಿತ್ಯ, ವೈದ್ಯ, ಶಿಕ್ಷಣ, ಅಭಿವೃದ್ಧಿ, ಶಿಕ್ಷಣ ಸುಧಾರಣೆ ಇತ್ಯಾದಿ), ನಾಗರೀಕ ಸೇವೆ(ಆಡಳಿತದಲ್ಲಿ ಸರ್ಕಾರಿ ನೌಕರರು ಸಾಧಿಸಿರುವ ಶ್ರೇಷ್ಠತೆ), ಕ್ರೀಡೆ, ಅಥ್ಲೆಟಿಕ್ಸ್, ಸಾಹಸ ಕ್ರೀಡೆ ಮತ್ತು ಯೋಗ, ಇತರೇ ಕ್ಷೇತ್ರಗಳಾದ ಮಾನವ ಹಕ್ಕುಗಳ ಸಂರಕ್ಷಣೆ, ಭಾರತದ ಸಂಸ್ಕೃತಿಯ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ವನ್ಯಮೃಗ ಸಂರಕ್ಷಣೆ ಒಳಗೊಂಡಂತೆ ಈ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಗಳಿಸಿ ಅಸಾಧಾರಣ ಕೊಡುಗೆ ನೀಡಿರುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಕ್ಷೇತ್ರಗಳಲ್ಲಿ ನೀಡಬಹುದಾದ ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಅರ್ಜಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ದಪಡಿಸಿ ಜುಲೈ, 25 ರೊಳಗೆ ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಕೊಡಗು ಜಿಲ್ಲೆ ಇವರಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.











