ಮಡಿಕೇರಿ ಮೇ 27 NEWS DESK : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ-ಮಳೆಯಿಂದಾಗಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾದಾಪುರ ಐಗೂರು ಹೊಳೆ ತುಂಬಿ ಹರಿಯುತ್ತಿದ್ದು, ಎಲ್ಲೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾದಾಪುರದ ಸುಂಟಿಕೊಪ್ಪ ವೃತ್ತದ ಬಳಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾಗಿದ್ದ ತಂಗುದಾಣದ ಮೇಲೆ ಬೃಹತ್ ಗಾತ್ರದ ಮರ ಕುಸಿದು ಬಿದ್ದ ಪರಿಣಾಮ ತಂಗುದಾಣ ನೆಲಸಮಗೊಂಡಿದೆ. ಮರ ಕುಸಿದು ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ರಂಬೆಗಳು ಅಪ್ಪಳಿಸಿದ್ದು, ಕಂಬಗಳು ಹಾನಿಗೊಂಡಿದೆ. ಕುಂಬೂರು ಸೇರಿದ ಈ ಮರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದು ಬಾರಿ ಗಾಳಿ ಮಳೆಯಿಂದ ಬುಡಸಮೇತ ಕುಸಿದು ಬಿದ್ದಿದೆ. ಈ ಸಂಬಂಧ ಮರವನ್ನು ತೆರವುಗೊಳಿಸಲು ಮಾದಾಪುರ ಗ್ರಾ.ಪಂ ಸದಸ್ಯ ಕೆ.ಎ.ಲತೀಫ್, ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಹಾಗೂ ಕುಂಬೂರು ತೋಟದ ಕಾರ್ಮಿಕರು ಬಿದ್ದ ಮರದ ಅವೇಶಗಳನ್ನು ತೆರವುಗೊಳಿಸಿದ್ದಾರೆ. ಮೇ 25 ರಂದು ರೋಯಿ ನಕ್ಷತ್ರದ ಕುಂಬದ್ರೋಣ ಮಳೆ ನಾಡಿನಾದ್ಯಂತ ಸುರಿಯುತ್ತಿದ್ದು, ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಸುಂಟಿಕೊಪ್ಪ ಜಂಕ್ಷನ್ ಬಳಿ ಬಿದ್ದ ತೆರವುಗೊಳಿಸುವ ಸಂದರ್ಭದಲ್ಲಿ ಚೆಸ್ಕಾಂ ಕಚೇರಿಯ ಕುಶಾಲನಗರ ವಿಭಾಗದ ಸಹಾಯಕ ಅಭಿಯಂತರರಾದ ಮಂಜುನಾಥ, ಕಿರಿಯ ಅಭಿಯಂತರರು, ತೋಟದ ಸಹಾಯಕ ವ್ಯವಸ್ಥಾಪಕ ರವೀಂದ್ರ ಇದ್ದರು.











