ಸೋಮವಾರಪೇಟೆ ಜೂ.6 NEWS DESK : ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಶೆಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಚೈಲ್ಡ್ ರೈಟ್ ಟ್ರಸ್ಟ್‍ನ ಜಿಲ್ಲಾ ಕ್ಷೇತ್ರ ಸಂಯೋಜಕಿ ಸುಮನ ಪ್ಲಾಸ್ಟಿಕ್ ಮರುಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಚಾಕಲೇಟ್ ಪ್ಲಾಸ್ಟಿಕ್ ನಿಂದ ಹಿಡಿದು ಎಲ್ಲಾ ತರಹದ ಪ್ಲಾಸ್ಟಿಕ್‍ಗಳನ್ನು ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕಿ ಇಡಬಹುದು. ನಂತರ ತುಂಬಿದ ಬಾಟಲಿಗಳನ್ನು ಸಂಗ್ರಹಿಸಿಟ್ಟು ಬಾಟಲಿಗಳನ್ನು ಮರುಬಳಕೆ ಮಾಡಬಹುದು ಎಂದು ಹೇಳಿದರು. ಪ್ಲಾಸ್ಟಿಕ್‍ಗಳನ್ನು ಬಾಟಲಿಯಲ್ಲಿ ತುಂಬಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರು. ನಮ್ಮ ಸುತ್ತಲಿನ ಪರಿಸರವನ್ನು ನಾವೆಲ್ಲರೂ ರಕ್ಷಿಸಲೇಬೇಕು. ಉತ್ತಮ ಪರಿಸರದಿಂದ ಮಾತ್ರ ಶುದ್ದ ಗಾಳಿ, ನೀರು ಸಿಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾವು ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು ಸಸಿಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕ ಬಿ.ಎಂ.ಸತೀಶ್, ಸಹಶಿಕ್ಷಕ ಟಿ.ಹೆಚ್.ಸುಕುಮಾರ್ ಇದ್ದರು.











