ಸೋಮವಾರಪೇಟೆ ಜೂ.16 NEWS DESK : ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದು. ಈ ಕಾರಣದಿಂದ ರಕ್ತದಾನ ಪವಿತ್ರವಾದ ದಾನ ಎಂದು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಕರುಂಬಯ್ಯ ಹೇಳಿದರು. ಜೆಸಿಐ ಸೋಮವಾರಪೇಟೆ ಪುಷ್ಪಗಿರಿ, ಡಾಲ್ಫೀನ್ಸ್ ಸ್ಪೂೀಟ್ರ್ಸ್ ಕ್ಲಬ್ ಹಾಗೂ ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ತಿಂಗಳಿಗೆ 500 ಯೂನಿಟ್ನಷ್ಟು ರಕ್ತದ ಅವಶ್ಯಕತೆಯಿದೆ. ಸಂಘ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸಬೇಕು. ರಕ್ತದಾನಿಗಳಿಗೆ ಹತ್ತಿರವಾದ ಸ್ಥಳದಲ್ಲೇ ಶಿಬಿರಗಳನ್ನು ಆಯೋಜಿಸಿದರೆ ಉಪಯೋಗವಾಗಲಿದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ 10 ಶಿಬಿರಗಳ ಆಯೋಜನೆಗೊಂಡಾಗ ಅವಶ್ಯಕತೆಯಷ್ಟು ರಕ್ತ ಸಂಗ್ರಹವಾಗಲಿದೆ ಎಂದು ಹೇಳಿದರು. ಜೆಸಿಐ ಸಂಸ್ಥೆಯ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ಡಾಲ್ಫೀನ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಜೆಸಿಐ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್, ಕಾರ್ಯದರ್ಶಿ ವಿನುತ ಸುದೀಪ್ ಇದ್ದರು. 48 ಮಂದಿ ರಕ್ತದಾನ ಮಾಡಿದರು. ಹೆಚ್ಚು ರಕ್ತದಾನ ಮಾಡಿದ ಚಂದ್ರಾವತಿ ಮತ್ತು ವಿಜಯ್ ಹಾನಗಲ್ ಅವರನ್ನು ಸನ್ಮಾನಿಸಲಾಯಿತು.












