ಸೋಮವಾರಪೇಟೆ ಜೂ.16 NEWS DESK : ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲೇ ಇಂಗ್ಲೀಷ್ ಕಲಿಸುವ ನಿರ್ಧಾರ ಶ್ಲಾಘನೀಯ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಹೇಳಿದರು. ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್‍ಕೆಜಿ ಮತ್ತು ಯುಕೆಜಿಯ 19 ಮಕ್ಕಳಿಗೆ ಸಮವಸ್ತ್ರ ಖರೀದಿಸಲು 17 ಸಾವಿರ ರೂ.ಗಳನ್ನು ವಿತರಿಸಿ ಮಾತನಾಡಿದರು. ಕಳೆದ ಒಂದು ದಶಕಗಳಿಂದ ಗ್ರಾಮೀಣ ಭಾಗದ ಅತೀ ಹೆಚ್ಚು ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿನಿ ಪಡೆದು ಜಿಲ್ಲೆಗೆ ಟಾಫರ್ ಆಗಿ, ರಾಜ್ಯದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ. ಆ ವಿದ್ಯಾರ್ಥಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ್ತಿದ್ದು ಎಂದು ಹೇಳಿದರು. ಕನ್ನಡ ಕಲಿಕೆ ಕಡ್ಡಾಯವಾಗಿರಬೇಕು. ಜೊತೆಯಲ್ಲಿ ಇಂಗ್ಲೀಷ್‍ನ್ನು ಕಲಿಸಬೇಕು. ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳು ಭಾಷೆಯನ್ನು ಬೇಗ ಕಲಿಯುತ್ತಾರೆ ಎಂದು ಅಭಿಪ್ರಾಯಿಸಿದರು. ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ವಲಯ ಸೇನಾನಿ ಪ್ರಕಾಶ್ ಕುಮಾರ್, ಮಾಜಿ ಸಹಾಯಕ ಪ್ರಾಂತಪಾಲ ಪಿ.ಕೆ.ರವಿ, ಮಾಜಿ ಅಧ್ಯಕ್ಷರುಗಳಾದ ಪಿ.ಎಸ್.ಮೋಹನ್ ರಾಮ್, ಬಿ.ಎಲ್.ಶಶಿಧರ್, ವಸಂತ್ ನಂಗಾರು, ಹಿರಿಯ ಪದಾಧಿಕಾರಿಗಳಾದ ಬಿ.ಎಸ್.ಸುಂದರ್, ಜಿ.ಡಿ.ನವೀನ್, ಡಿ.ಪಿ.ರಮೇಶ್, ಮುಖ್ಯ ಶಿಕ್ಷಕಿ ಸುನಿತಾ, ಮಾಜಿ ಸೈನಿಕ ರವಿ ಇದ್ದರು.












