ಮಡಿಕೇರಿ ಜೂ.30 NEWS DESK : ಮೈಸೂರು ಕೊಡವ ಸಮಾಜದ ಯುವ ಘಟಕದ ವತಿಯಿಂದ ಆಯೋಜನೆಗೊಂಡ ಕೊಡವ ಹಾಕಿ ಪ್ರೀಮಿಯರ್ ಲೀಗ್ 2025 ಪಂದ್ಯಾವಳಿಯ ಫೈನಲ್ ಪಂದ್ಯಾಟವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಹಾಕಿಯಲ್ಲಿ ಕೊಡಗಿನ ಪ್ರತಿಭೆಗಳು ಅದರಲ್ಲೂ ವಿಶೇಷವಾಗಿ ಕೊಡವರು ಉತ್ತಮ ಪ್ರದರ್ಶನ ತೋರಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಹಲವು ಉನ್ನತ ಹಾಕಿ ಪಟುಗಳು ದೇಶವನ್ನು ಪ್ರತಿನಿಧಿಸುವಂಥಾಗಲಿ ಎಂದು ಶುಭ ಕೋರಿದರು. ಪಂದ್ಯಾವಳಿಯನ್ನು ಆಯೋಜಿಸಿದ ಯುವ ಘಟಕದ ಪ್ರಯತ್ನವನ್ನು ಶ್ಲಾಘಿಸಿದ ಶಾಸಕರು, ಇಂತಹ ಪಂದ್ಯಾವಳಿಗಳು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತಾಗಿದೆ ಎಂದರು. ಕಾರ್ಯಕ್ರಮ ಆಯೋಜಕರು, ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.












