ವಿರಾಜಪೇಟೆ ಜು.10 NEWS DESK : ವಿರಾಜಪೇಟೆಯ ಮಗ್ಗುಲದಲ್ಲಿರುವ ಭಾರತೀಯ ವೈದ್ಯಕೀಯ ಸಂಘ ಮತ್ತು ಕೊಡಗು ವೈದ್ಯಕೀಯ ಕಾಲೇಜು ವತಿಯಿಂದ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಕಂಜಿತಂಡ ಸುನಿಲ್ ಮುದ್ದಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ 30 ವರ್ಷಗಳಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಮಡಿಕೇರಿಯ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಸುನಿಲ್ ಮುದ್ದಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಡಿಕೇರಿಯ ಕೋಯಿಮ್ಸ್‍ನ ನಿರ್ದೇಶಕ ಮತ್ತು ಡೀನ್ ಡಾ. ಎ.ಕೆ.ಲೋಕೇಶ್ ಮತ್ತು ಐಎಂಎ ಅಧ್ಯಕ್ಷ ಡಾ.ಶ್ಯಾಮ್ ಮತ್ತು ಅನೇಕ ಪ್ರಖ್ಯಾತ ವೈದ್ಯರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು ಸಮಾರಂಭದಲ್ಲಿ ಉಪಸ್ಥಿತರಿದ್ದರು.










