ಸುಂಟಿಕೊಪ್ಪ ಜು.16 NEWS DESK : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 2025-26ನೇ ಸಾಲಿನ ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಕೆ.ವಿ.ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಕಂಬಿಬಾಣೆ, ಖಜಾಂಚಿಯಾಗಿ ಅಜೀಜ್ ಕೊಡರಗರಹಳ್ಳಿ ಆಯ್ಕೆಯಾಗಿದ್ದಾರೆ. ಸಂಘದ ಸಾರ್ವಜನಿಕ ಸಂಭಾಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಕಿಟ್ಟಣ್ಣ ರೈ ವಹಿಸಿದ್ದರು. ಸಭೆಯಲ್ಲಿಕಳೆದ ಸಾಲಿನ ಲೆಕ್ಕಪತ್ರ ಮಂಡನೆ ಮಾಡಲಾಯಿತು. 2025-26ರ ಸಾಲಿನ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಅಬ್ದುಲ್ಲಕುಟ್ಟಿ, ಬಿ.ಎ.ಕೃಷ್ಣಪ್ಪ, ಸಹಕಾರ್ಯದರ್ಶಿಯಾಗಿ ಪಟ್ಟೆಮನೆ.ಎಸ್.ರಕ್ಷಿತ್ ರೀನು, ಸಂಘಟನಾ ಕಾರ್ಯದರ್ಶಿಯಾಗಿ ರಿಜ್ವಾನ್, ಕಾರ್ಯಕಾರಿಸಮಿತಿ ಗೆ ಸಿ.ಎ.ಬಸಪ್ಪ, ರಾಜ, ಇನಾಸ್ ಡಿಸೋಜ, ಕೆ.ರವಿ, ಸಂದೀಫ್‍ಬಿ.ಎಸ್., ಬಿ.ಕೆ.ಸುರೇಶ್, ಅಸೀಸ್‍ಹೊಸಕೋಟೆ, ಅಸ್ಕರ್, ಜೈನುದ್ದೀನ್, ಶಕ್ತಿವೇಲು, ರಫೀಕ್ ಮೊನು ಮಣಿ ರಾಜ್ ತಂಬಿ, ಎಂ.ಎ.ದೇವಯ್ಯ, ಕುಮಾರ ಜಿ., ಎಂ.ಎಸ್.ಶಾಜಿ., ಸಲೀಂ ಗದ್ದೆಹಳ್ಳ, ಸಲಹಾ ಸಮಿತಿ ಸದಸ್ಯರುಗಳಾಗಿ ಆರ್.ರಾಜ, ಇಸ್ಮಾಯಿಲ್ ಕಾಕು ನೇಮಕಗೊಂಡರು. ಇದೇ ಸಂದರ್ಭ ಕಳೆದ ಬಾರೀ ಸಂಘವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ ಹಾಗೂ ಚಾಲಕ ಸಿ.ಎ.ಬಸಪ್ಪ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.










