ಮಡಿಕೇರಿ ಜು.16 NEWS DESK : ಪ್ರಧಾನಮಂತ್ರಿ ಜನ್ ಜಾತೀಯ ಆದಿವಾಸಿ ಮಹಾ ಅಭಿಯಾನ (ಪಿಎಂ-ಜನ್‍ಮನ್) ಯೋಜನೆಯಡಿ ಜೇನುಕುರುಬ ಜನಾಂಗದವರಿಗೆ ಘಟಕ ವೆಚ್ಚ ರೂ.4.50 ಲಕ್ಷಗಳಲ್ಲಿ ಮನೆಯನ್ನು ಮಂಜೂರು ಮಾಡಲಾಗುತ್ತಿದ್ದು, ವಸತಿ ರಹಿತ ಜೇನುಕುರುಬ ಜನಾಂಗದ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಅವರು ಕೋರಿದ್ದಾರೆ. ಜೇನುಕುರುಬ ಜನಾಂಗದವರನ್ನು ಹೊರತುಪಡಿಸಿ ಇತರೆ ಪರಿಶಿಷ್ಟ ಪಂಗಡದ ಜನಾಂಗದವರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಿವೇಶನ ರಹಿತ ಮತ್ತು ವಸತಿ ರಹಿತ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯಾಧಿಕಾರಿ ತಿಳಿಸಿದ್ದಾರೆ.










