ವಿರಾಜಪೇಟೆ ಜು.16 NEWS DESK : ವಿರಾಜಪೇಟೆ ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಹಾಗೂ ಅಧ್ಯಕ್ಷರಾಗಿ ನಿವೃತ್ತ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ಹಾಗೂ ಈ.ಪಿ.ನೆಲ್ಸನ್ ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆ ಯಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಇತರ ಸದಸ್ಯರುಗಳ ಒಪ್ಪಿಗೆಯೊಂದಿಗೆ ಸರ್ವಾನುಮತದಿಂದ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭ ಸಂಘದ ನೂತನ ಅಧ್ಯಕ್ಷರಾದ ಚಾರ್ಲ್ಸ್ ಡಿಸೋಜಾ ಮಾತನಾಡಿ, ಸಂತ ಅನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತವು ಪ್ರಸ್ತುತ 400ಕ್ಕೂ ಅಧಿಕ ಪಡಿತರದಾರರನ್ನು ಹೊಂದಿದ್ದು, ಅಕ್ಕಿಯನ್ನು ಪಡಿತರದಾರರಿಗೆ ಉಚಿತವಾಗಿ ವಿತರಿಸಲಾತ್ತಿದೆ. ಇನ್ನು ಮುಂದಿನ ದಿವಸಗಳಲ್ಲಿ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಸಗೊಬ್ಬರ, ಕೀಟ ನಾಶಕಗಳು, ಕೃಷಿ ಉಪಕರಣಗಳನ್ನು ಮಾರಾಟ ಮಾಡುವ ಯೋಜನೆ ಇದ್ದು, ರೈತಾಪಿ ವರ್ಗಕ್ಕೆ ಸಹಕರಿಸುವ ಕ್ರಿಯಾಯೋಜನೆಯನ್ನು ಹೊಂದಲಾಗಿದೆ ಎಂದು ಹೇಳಿದರು. ಸರ್ವ ಸದಸ್ಯರ ಹಾಗೂ ಪಡಿತರದಾರರ ಸಹಕಾರದಿಂದ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು. ಈ ಸಂದರ್ಭ ಪ್ರಮುಖರಾದ ಮರ್ವಿನ್ ಲೋಬೋ, ಜೋಕಿಂ ರಾಡ್ರಿಗೀಸ್, ಮಾರ್ಟಿನ್ ಬರ್ನಾಡ್, ಜೋಸೆಫ್, ಮತಿಲ್ಡ ಡಿಸೋಜಾ, ಸಂಘದ ಇತರ ಸದಸ್ಯರುಗಳು ಉಪಸ್ಥಿತರಿದ್ದರು.










