ಮಡಿಕೇರಿ NEWS DESK ಅ.17 : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮುಂಜಾನೆ 5.30 ಗಂಟೆಗೆ ಬಂದಿಳಿದ ಬ್ರಿಟಿಷ್ ಏರ್ ವೇಸ್ ವಿಮಾನ ಪ್ರಯಾಣಿಕರಿಗೆ ಆಶ್ಚಯ೯ ಕಾದಿತ್ತು, ಬೆಂಗಳೂರಿನಲ್ಲಿ ಇನ್ನೇನು ವಿಮಾನ ಇಳಿಯಬೇಕೆಂಬಷ್ಟರಲ್ಲಿ ವಿಮಾನದ ಪೈಲಟ್, ಬ್ರಿಟಿಷ್ ಏರ್ ವೇಸ್ ಪರವಾಗಿ ಎಲ್ಲಾ ಯಾತ್ರಿಗಳಿಗೆ ಕನಾ೯ಟಕದ ಜೀವನದಿಯ ತೀಥೋ೯ದ್ವವ ಮತ್ತು ಕಾವೇರಿ ಸಂಕ್ರಮಣದ ಶುಭಾಷಯ ತಿಳಿಸಿದರು. ಕೊಡಗಿನ ಮೂಲದ ಪಡಿಯಂಡ ದೀಪಕ್ ಈ ವಿಮಾನದ ಪೈಲಟ್ ಆಗಿದ್ದು, ತನ್ನ ಜಿಲ್ಲೆಯಲ್ಲಿ ಅಂದು ಮಧ್ಯಾಹ್ನ ಸಂಭವಿಸುತ್ತಿದ್ದ ಕಾವೇರಿ ಪವಿತ್ರ ತೀಥೋ೯ದ್ವವದ ಬಗ್ಗೆ ಯಾತ್ರಿಕರಿಗೆ ಮಾಹಿತಿ ನೀಡಿ ಅವರು ಸಂಭ್ರಮ ವಿನಿಮಯ ಮಾಡಿಕೊಂಡರು.











