


ಮಡಿಕೇರಿ ನ.8 NEWS DESK : ಅಮ್ಮತ್ತಿ ಪ್ರೌಢಶಾಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢ ಶಾಲಾ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಲಯನ್ಸ್ ಪ್ರೌಢ ಶಾಲಾ ಬಾಲಕಿಯರ ಫುಟ್ಬಾಲ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ. ಕೊಡಗು ಜಿಲ್ಲಾ ತಂಡವು ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಸೊಲಿಸಿ ಜಯ ಸಾಧಿಸಿದೆ. ಕೊಡಗು ತಂಡದ ಗೋಲ್ ಕೀಪರ್ ಖುಷಿ ತಂಗಮ್ಮ ಪಂದ್ಯದುದ್ದಕ್ಕೂ ಸಂಭವನಿಯ ಗೋಲುಗಳನ್ನು ತೊಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೋಣಿಕೊಪ್ಪ ಲಯನ್ಸ್ ಶಾಲೆಯ ಶ್ರಾವ್ಯ, ಸೀತಮ್ಮ, ರಿಷಿಕಾ ಬಿಮಯ್ಯ ವಂಶಿಕಾ ಡಿ.ಜೆ, ಖುಷಿ ತಂಗಮ್ಮ, ಪೂಜಿತ, ತೃಷ, ಪರಿಣಿತಾ, ಹಾತೂರು ಪ್ರೌಢಶಾಲೆಯ ವಿಧ್ಯ, ಸೋನಿ, ಭವ್ಯ ಸಂತ ಜೊಸೆಫ್ ಪ್ರೌಢ ಶಾಲೆಯ ವಿಧಿತಾ, ಸೋನಶ್ರೀ, ರಿಫಾಮರಿಯಾಮ, ಪ್ರಣಿತ್ ಪೂವಮ್ಮ ತನುಷಾ .ಪಿ.ಬಿ.ಇಂಚರಾ ಲಯನ್ಸ್ ಪ್ರೌಢ ಶಾಲಾ ತಂಡದ ಪರವಾಗಿ ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು. ತಂಡದ ತರಬೇತುದಾರರಾಗಿ ಲಯನ್ಸ್ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪಂದಿಕಂಡ ನಾಗೇಶ್ ಭಾಗವಹಿಸಿದ್ದರು. ಲಯನ್ಸ್ ಶಾಲಾ ಮುಖ್ಯ ಶಿಕ್ಷಕಿ ಗಾನ ಸೇರಿದಂತೆ ಲಯನ್ಸ್ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿ ಶಾಲಾ ತಂಡವನ್ನು ಪ್ರೋತ್ಸಾಹಿಸಿದರು.










