
ಮಡಿಕೇರಿ ನ.12 NEWS DESK : ಪುತ್ತೂರಿನ ಮುಖ್ಯರಸ್ತೆಯ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕುಟುಂಬದೊಂದಿಗೆ ಕಳೆದಂತಹ ಸುಂದರ ಕ್ಷಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪೇಜ್ ಫೋಲೋ ಹಾಗೂ ಟ್ಯಾಗ್ ಮಾಡಿ ಹೆಚ್ಚು ಶೇರ್‌ಗಳನ್ನು ಪಡೆಯುವ ಕುಟುಂಬದ ಪೋಸ್ಟ್‌ಗಳಿಗೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಯಲ್ಲಿ ಮಂಗಳೂರಿನ ಅನನ್ಯ ಡೈಮಂಡ್ ಪೆಂಡೆಂಟ್ ವಿಜೇತರಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.









