ಮಡಿಕೇರಿ ನ.19 NEWS DESK : ಪ್ರಖ್ಯಾತ ಸ್ವರ್ಣೋದ್ಯಮಿ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥಾಪಕ ಜಿ.ಎಲ್ ಆಚಾರ್ಯ ಅವರ 101ನೇ ಜನ್ಮದಿನಾಚರಣೆಯನ್ನು ಪುತ್ತೂರುನ ಸಂಸ್ಥೆಯಲ್ಲಿ ಆಚರಿಸಲಾಯಿತು. ಈ ಸಂದರ್ಭ ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ 10 ಡಬಲ್ ಡೆಕ್ಕರ್ ಕಾಟ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ, ಆಶ್ರಮದ ಕಾರ್ಯದರ್ಶಿ ಗುಣಪಾಲ್ ಜೈನ್, ಸದಸ್ಯ ಹರೇಕೃಷ್ಣ ಕಡಂಬಳಿತ್ತಾಯ ಮತ್ತು ಜಂಟಿ ಕಾರ್ಯದರ್ಶಿ ವತ್ಸಲ ರಾಜ್ನಿ ಹಾಜರಿದ್ದರು.












