ವಿರಾಜಪೇಟೆ ಸೆ.21 NEWS DESK : ಹೆಗ್ಗಳ ಗ್ರಾಮದ ಪಾಲೆಟ್ ಮಕ್ಕಿಯಲ್ಲಿರುವ ನಾಗ ದೇವಾಲಯದಲ್ಲಿ ನ.25 ರಂದು ಸ್ಕಂದ ಪಂಚಮಿಯ ದಿವಸ ವಾರ್ಷಿಕ ಮಹಾಪೂಜೆ ಜರುಗಲಿದೆ. ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣಾ ಸೇವೆ ನೆರವೇರಲಿದೆ. ಹರಕೆ ವಸ್ತುಗಳು ದೇವಸ್ಥಾನದಲ್ಲಿಯೇ ದೊರೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.











