ನಾಪೋಕ್ಲು ನ.26 NEWS DESK : ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಾಲಿಬಾಲ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಟೌನ್ ಟೈಗರ್ ತಂಡ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಗೇಮ್ 07 ತಂಡ ಪಡೆದುಕೊಂಡಿತು. ವಿಜೇತ ಟೌನ್ ಟೈಗರ್ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು, ದ್ವಿತೀಯ ಸ್ಥಾನ ಪಡೆದ ಗೇಮ್ 07 ತಂಡಕ್ಕೆ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಸರ್ಫೂದ್ದೀನ್ ಹಾಗೂ ತೀರ್ಪುಗಾರರಾಗಿ ಮಹಮ್ಮದ್ ಅಲಿ ಚಿಕ್ಕಮಂಗಳೂರು ನೆರವೇರಿಸಿದರು. ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಲಕಾರ್ಯಕ್ರಮದಲ್ಲಿ ಗಣ್ಯರು ನಗದು ಹಾಗೂ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು. ಇದಕ್ಕೂ ಮೊದಲು ಗಣ್ಯರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಬಳಿಕ ಚೆಂಡನ್ನು ಸರ್ವಿಸ್ ಮಾಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು. ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ವಿಎಸ್‍ಎಸ್‍ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ನಾಪೆÇೀಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎ.ಇಸ್ಮಾಯಿಲ್, ಡೆಕ್ಕನ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಎ.ಮನ್ಸೂರು ಅಲಿ, ಯುನೆಸ್ ಪಿಎಂ, ರಶೀದ್ ಪಿ.ಎಂ, ಅರಫತ್, ಸಿರಾಜುದ್ದೀನ್ ಚೆರಿಯಪರಂಬು, ಆದಿಲ್, ಅಹ್ಮದ್ ಸಿ.ಹೆಚ್, ಹಾರೀಸ್, ಆಸ್ಕರ್, ಆಸಿಫ್, ರಶೀದ್ ಪಿ.ಎಂ, ಮಹಮ್ಮದ್ ಅಲಿ, ಅಹಮದ್ ಸಿ.ಹೆಚ್, ಉಪ ಅಧ್ಯಕ್ಷ ಸಂಶು ಕಾರೆಕ್ಕಾಡ್, ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು, ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ











