ಮಡಿಕೇರಿ ನ.28 NEWS DESK : ಕೊಡಗಿನ ವಿರಾಜಪೇಟೆಯ ಪೆರಂಬಾಡಿಯಲ್ಲಿರುವ ಶಂಸುಲ್ ಉಲಮಾ ಬಡ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಅನಾಥಾಲಯದ ಬನಾತ್ ಯುಎಇ ಸಮಿತಿಯನ್ನು ಸಂಸ್ಥೆಯ ಮುಖ್ಯಸ್ಥರಾದ ಬಷೀರ್ ಹಾಜಿ ವಿರಾಜಪೇಟೆ ಅವರ ನೇತೃತ್ವದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಹುಸೈನ್ ಫೈಝಿ ಸೋಮವಾರಪೇಟೆ ಹಾಗೂ ಮುಖ್ಯ ಕಾರ್ಯದರ್ಶಿಯಾಗಿ ರಫೀಕಲಿ ಕುಂಡಂಡ ಕುಂಜಿಲ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಾರಿಸ್ ಬಾಖವಿ ಎಡಪಾಲ, ಅಬ್ದುಲ್ ಸಲಾಂ ಕುಂಜಿಲ, ಸಹ ಕಾರ್ಯದರ್ಶಿಗಳಾಗಿ ಯಹ್ಯಾ – ಕೊಡ್ಲಿಪೇಟೆ, ನವಾಜ್ – ಎಡಪಾಲ ಆಯ್ಕೆಯಾದರು. ಖಜಾಂಚಿಯಾಗಿಅಶ್ರಫ್ ಇಅ ಎಮ್ಮೆಮಾಡು, ಸಲಹಾ ಸಮಿತಿಗೆ ಸಯ್ಯಿದ್ ಅಷ್ಕರ್ ಅಲಿ ತಂಗಳ್ ಮಂಗಳೂರು, ಬಶೀರ್ ಹಾಜಿ ವಿರಾಜಪೇಟೆ, ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಬಶೀರ್ ಹಾಜಿ ಎಡಪಲ, ಸಲೀಂ ಹಾಜಿ ಆರೆಕ್ಕಾಡು ನೇಮಕಗೊಂಡರು. ಸಮಿತಿ ಸದಸ್ಯರಾಗಿ ಜುನೈದ್ ಬಜೆಗುಂಡಿ, ಬಶೀರ್ ಚೇರಂಬಾಣೆ, ಸಫ್ವಾನ್ ಚಾಮಿಯಾಲ, ನಿಜಾಮ್ ಎಡಪಾಲ, ನಿಶಾಬ್ ನೆಲ್ಲಿಹುದಿಕೇರಿ, ಉಸ್ಮಾನ್ ಕುಶಾಲನಗರ ಆಯ್ಕೆಯಾದರು.











