ಮಡಿಕೇರಿ ಡಿ.2 NEWS DESK : ಹಿರಿಯ ನಾಗರಿಕರ ವೇದಿಕೆಯ ಸ್ನೇಹಕೂಟ ಸಮಾರಂಭವು ನಗರದ ಬಾಲಭವನದ ಆವರಣದಲ್ಲಿ ಸಂಭ್ರಮದಿಂದ ನಡೆಯಿತು. ವೈದ್ಯರಾದ ಡಾ.ಚೇತನ್ ಜಿ.ಡಿ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಹಿರಿಯ ನಾಗರಿಕರಿಗೆ ಉಪಯುಕ್ತವಾದ ಆರೋಗ್ಯ ಸಲಹೆಯನ್ನು ಪವರ್ ಪಾಯಿಂಟ್ ಮೂಲಕ ತಿಳಿಸಿದರು. ವೇದಿಕೆಯ ಅಧ್ಯಕ್ಷರಾದ ಕೊಂಗಾಂಡ ಎ.ತಿಮ್ಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತವಿಕವಾಗಿವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಿಗ್ಗಟ್ಟು ನಾಡು ಹಿರಿಯ ನಾಗರಿಕರ ವೇದಿಕೆಯ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯನ್ನು ವಸಂತಿ ಪೂಣಚ್ಚ ಹಾಗೂ ವಿಜು ನಂಜಪ್ಪ ಅವರು ನಡೆಸಿಕೊಟ್ಟರು. ಶೋಭಾ ಸುಬ್ಬಯ್ಯ ಅವರು ಪ್ರಾರ್ಥಿಸಿದರು. ಉಪಾಧ್ಯಕ್ಷರಾದ ಲೀಲಾ ಚಿಣ್ಣಪ್ಪ, ಉಪಕಾರ್ಯದರ್ಶಿ ಗಂಗಮ್ಮ, ಬಾಬು ಸೋಮಯ್ಯ, ಕಿಗ್ಗಟ್ಟುನಾಡು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಸೋಮಣ್ಣ ಹಾಗೂ ಅವರ ಆಡಳಿತ ಮಂಡಳಿಯ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು. ವೇದಿಕೆಯ ಸದಸ್ಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪಿ.ಪಿ.ಸೋಮಣ್ಣ ಅವರು ಅತಿಥಿಗಳನ್ನು ಪರಿಚಯಿಸಿದರು. ಐ.ಎಸ್.ಅರವಿಂದ ಅವರು ಸನ್ಮಾನಿತರ ಪರಿಚಯ ಮಾಡಿದರು. ಪಿ.ಎಸ್.ಅರವಿಂದ ಅವರು ನಿರೂಪಿಸಿದರು. ಬಿ.ಎಸ್.ಚೆಂಗಪ್ಪ ವಂದಿಸಿದರು.










