ಕುಶಾಲನಗರ ಡಿ.5 NEWS DESK : ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕುಶಾಲನಗರ ಕೊಡವ ಸಮಾಜದ ಆವರಣದಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ವಾಂಚೀರ ಮನು ನಂಜುಂಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇರಿದ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಅಂಜಪರವಂಡ ಸನ್ನಿ ತಮ್ಮಯ್ಯ ಅವರು ಕುತ್ತಿ ಪೂಜೆ ನೆರವೇರಿಸಿ, ಆವರಣದ ಗದ್ದೆಗೆ ತೆರಳಿ ಸಾಂಪ್ರದಾಯಿಕವಾಗಿ ಕದಿರು ತೆಗೆದರು. ನಂತರ ಸಮಾಜಕ್ಕೆ ಬಂದು ಕದಿರು ವಿತರಣೆ ನಡೆಯಿತು. ಈ ಸಂದರ್ಭ ಸಮಾಜದ ಉಪಾಧ್ಯಕ್ಷರಾದ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ, ಸಹ ಕಾರ್ಯದರ್ಶಿ ಮೈಂದಪಂಡ ಜಗದೀಶ್, ಖಜಾಂಚಿ ಬೊಳ್ಳಚಂಡ ಮುತ್ತಣ್ಣ , ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರು ಸಾರ್ವಜನಿಕರು ಇದ್ದರು.











