
ಮಡಿಕೇರಿ ಏ.2 NEWS DESK : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿರುವ ಶ್ರೀ ತಲಕಾವೇರಿ ದೇವಾಲಯದಲ್ಲಿ ಶ್ರೀ ಉಚ್ಚಿಲ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಏಪ್ರಿಲ್, 10 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಏಪ್ರಿಲ್, 10 ರಂದು ಬೆಳಗ್ಗೆ 9 ಗಂಟೆಯಿಂದ ಗಣಪತಿ ಹೋಮ, ಪುಣ್ಯಾಹ, ಅಗಸ್ತ್ಯೇಶ್ವರ ಸಾನಿಧ್ಯದಲ್ಲಿ ಕಳಶ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಕಾವೇರಿ ಅಮ್ಮನವರಿಗೆ ಸಂಪ್ರೋಕ್ಷಣೆ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾಧಿಗಳು ದೇವಾಲಯದಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್ ಅವರು ಕೋರಿದ್ದಾರೆ.








