

ಮಡಿಕೇರಿ NEWS DESK ಏ.24 : ಗಾಳಿಬೀಡು ಚಾಂಪಿಯನ್ಸ್ ಕ್ಲಬ್ ಸೀಸನ್ 4ರ ವತಿಯಿಂದ ಕ್ರಿಕೆಟ್ ಪಂದ್ಯಾಟ ಮತ್ತು ವಿವಿಧ ಕ್ರೀಡಾಕೂಟಗಳನ್ನು ಏ.25 ಹಾಗೂ 26ರಂದು ಆಯೋಜಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ಕಪಿಲ್ ಕುಮಾರ್ ದುಗ್ಗಳ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಿನಗಳ ಕಾಲ ನಡೆಯುವ ವಿವಿಧ ಕ್ರೀಡಾ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು. ಆಹ್ವಾನಿತ 6 ತಂಡಗಳಿoದ ಕ್ರಿಕೆಟ್ ಪಂದ್ಯಾಟ, ಪುರುಷ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಕ್ರೀಡೆಗಳು ನಡೆಯಲಿದೆ. ಅಲ್ಲದೆ ಪುರುಷರ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದ್ದು, ಗಾಳಿಬೀಡು ಪ್ರೌಢ ಶಾಲಾ ಮೈದಾನದ ಬಳಿಯಿಂದ ಸ್ಪರ್ಧೆ ಆರಂಭಗೊಳ್ಳಲಿದೆ. ಗಾಳಿಬೀಡು ಗ್ರಾಮಸ್ಥರಿಗೆ ಸೀಮಿತವಾಗಿ ಕಾಳು ಎಕ್ಕುವುದು (4 ವರ್ಷದ ಒಳಗಿನ ಮಕ್ಕಳಿಗೆ), 100 ಮೀಟರ್ ಓಟ ಕಿರಿಯ ಬಾಲಕ /ಬಾಲಕಿಯರಿಗೆ (1ರಿಂದ 4ನೇ ತರಗತಿ), 100 ಮೀಟರ್ ಓಟ ಹಿರಿಯ ಬಾಲಕ /ಬಾಲಕಿಯರಿಗೆ (5 ರಿಂದ 7ನೇ ತರಗತಿ), 100 ಮೀಟರ್ ಓಟ ಪ್ರೌಢಶಾಲಾ ಬಾಲಕ /ಬಾಲಕಿಯರಿಗೆ (8 ರಿಂದ 10ನೇ ತರಗತಿ), 100 ಮೀಟರ್ ಓಟ (ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಬಾಲಕ ಹಾಗೂ ಬಾಲಕಿಯರಿಗೆ), ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ 100 ಮೀಟರ್ ಓಟದ ಸ್ಪರ್ಧೆ, ವಿಷದ ಚೆಂಡು ಗಾಳಿಬೀಡು ಗ್ರಾಮಸ್ಥರಿಗೆ (ಮಹಿಳೆ ಹಾಗೂ ಪುರುಷರಿಗೆ) ನಡೆಯಲಿದೆ. ಹಗ್ಗ ಜಗ್ಗಾಟದ ಪುರುಷರ ವಿಭಾಗಕ್ಕೆ ಪ್ರಥಮ ಬಹುಮಾನ ರೂ.20,000, ದ್ವಿತೀಯ ಬಹುಮಾನ ರೂ.10,000 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹಗ್ಗ ಜಗ್ಗಾಟದ ಪುರುಷರ ವಿಭಾಗದ ಮೈದಾನದ ಶುಲ್ಕ ರೂ.2000 ಆಗಿರುತ್ತದೆ. ಹಗ್ಗ ಜಗ್ಗಾಟದ ಮಹಿಳೆಯರ ವಿಭಾಗಕ್ಕೆ ಪ್ರಥಮ ಬಹುಮಾನ ರೂ.10,000 ದ್ವಿತೀಯ ಬಹುಮಾನ ರೂ.5,000 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹಗ್ಗ ಜಗ್ಗಾಟದ ಮಹಿಳೆಯರ ವಿಭಾಗದ ಮೈದಾನದ ಶುಲ್ಕ ರೂ.1000 ಆಗಿದೆ. ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.5,000 ದ್ವಿತೀಯ ಬಹುಮಾನ ರೂ. 3.000 ತೃತೀಯ ಬಹುಮಾನ ರೂ.1500 ನೀಡಲಾಗುವುದು. ಎಲ್ಲಾ ಕ್ರೀಡಾಕೂಟಗಳು ಗಾಳಿಬೀಡು, ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕಪಿಲ್ ಕುಮಾರ್ ತಿಳಿಸಿದರು. ಹಗ್ಗಜಗ್ಗಾಟ ಮತ್ತು ಗುಡ್ಡಗಾಡು ಓಟದ ಸ್ಪರ್ಧಿಗಳು ಏ.26 ರಂದು ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಮೈದಾನದಲ್ಲಿ ಇರಬೇಕು. ಎರಡು ದಿನವೂ ಕ್ರೀಡಾಪಟುಗಳಿಗೂ ಹಾಗೂ ಪ್ರೇಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಹೆಚ್ಚಿನ ಮಾಹಿತಿಗೆ 9731009841, 9740198743, 9980938237, 7483587273 ನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ದಿಶಾಂತ್, ಖಜಾಂಚಿ ಬಬಿತ್ ಪೂಜಾರಿ, ಜಂಟಿ ಕಾರ್ಯದರ್ಶಿ ಶಿವಪ್ರಸಾದ್ ರೈ ಹಾಗೂ ಸಹ ಕಾರ್ಯದರ್ಶಿ ಸಂಗಮ್ ಉಪಸ್ಥಿತರಿದ್ದರು.








