
ಮಡಿಕೇರಿ ಮೇ 7 NEWS DESK : ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳನ್ನು ಒಳಗೊಂಡ ಗ್ರೀನ್ ಜಿಂಜರ್ ಡೀಲರ್ಸ್ ಅಸೋಸಿಯೇಷನ್‍ನ ಮಹಾ ಸಭೆ ಪೊನ್ನಂಪೇಟೆಯ ಖಾಸಗಿ ರೆಸಾರ್ಟ್‍ನಲ್ಲಿ ನಡೆಯಿತು. ಮಹಾಸಭೆಯನ್ನು ಉದ್ದೇಶಿಸಿ ಸಾಬು ಐಪು ಮಾತನಾಡಿದರು. ಅಸೋಸಿಯೇಷನ್‍ನ ಕೋಶಾಧಿಕಾರಿ ಮಸೂದ್ ಅವರು ಲೆಕ್ಕ ಪತ್ರ ಮಂಡಿಸಿದರು. ಸುಲೈಮಾನ್ ಸಿ.ಬಿ, ಜಾಕೋಬ್, ಮನು ಕೆ.ಜಿ.ಟಿ, ಅವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ನೂತನ ಸಾಲಿನ ಅಧ್ಯಕ್ಷರಾಗಿ ಸಾಬು ಐಪು, ಪ್ರಧಾನ ಕಾರ್ಯದರ್ಶಿಯಾಗಿ ಬಟ್ಟಕಾಳ0ಡ ರಾಜ, ಕೋಶಾಧಿಕಾರಿಯಾಗಿ ಜಾಯ್ ಪಿ.ವಿ.ಜೆ, ಉಪಾಧ್ಯಕ್ಷರಾಗಿ ಜೋಬಿ, ಮೊಹಮ್ಮದ್ ನಹೀಸ್, ಮನು ಕೆ.ಜಿ.ಟಿ, ಅವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳಾಗಿ ಮಸೂದ್, ಜೇಕಬ್, ಬಾಲು ಕುಶಾಲನಗರ ಅವರುಗಳು ಆಯ್ಕೆಯಾದರು. ಚುನಾವಣಾ ಉಸ್ತುವಾರಿಯಾಗಿ ಕೇರಳ ವಯನಾಡ್ ಜಿಲ್ಲೆಯ ಗ್ರೀನ್ ಜಿಂಜರ್ ವ್ಯಾಪಾರಿಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಉಸ್ಮಾನ್ ಕಾರ್ಯನಿರ್ವಹಿಸಿದರು.









